ಸ್ಯಾಂಡಲ್ ವುಡ್ ನಟಿ ಹರ್ಷಿಕಾ ಪೂಣಚ್ಚ ಮದುವೆ ನಂತರ ನಟನೆಗೆ ಮರಳಿದ್ದಾರೆ. ಅದೂ ಭೋಜಪುರಿ ಚಿತ್ರದಲ್ಲಿ ನಟಿಸುತ್ತಿದ್ದು, ಈ ಚಿತ್ರ 8 ಭಾಷೆಗಳಲ್ಲಿ ಬಿಡುಗಡೆ ಆಗುವ ಮೂಲಕ ದೊಡ್ಡ ಸದ್ದು ಮಾಡುವ ನಿರೀಕ್ಷೆ ಇದೆ.
ಹರ್ಷಿಕಾ ಪೂಣಚ್ಚ ಆಗಸ್ಟ್ 24ರಂದು ನಟ ಭುವನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ನಂತರ ವಿದೇಶೀ ಪ್ರವಾಸ ಮುಗಿಸಿ ಮರಳಿದ ಬೆನ್ನಲ್ಲೇ ತೆರೆಮೇಲೆ ಬರಲು ಸಜ್ಜಾಗಿದ್ದಾರೆ.
ವಿಶೇಷ ಅಂದರೆ ಹರ್ಷಿಕಾ ಪೂಣಚ್ಚ ನಟನೆಯ ಜೊತೆ ನಿರ್ಮಾಪಕಿಯಾಗಿಯೂ ಬಡ್ತಿ ಪಡೆದಿದ್ದಾರೆ. ಒಂದು ಕಡೆ 8 ಭಾಷೆಯಲ್ಲಿ ತಯಾರಾಗುತ್ತಿರುವ ಭೋಜಪುರಿ ಚಿತ್ರದಲ್ಲಿ ನಟಿಸುತ್ತಿದ್ದರೆ, ಮತ್ತೊಂದೆಡೆ ಪತಿ ಭುವನ್ ಅಭಿನಯದ ಚಿತ್ರಕ್ಕೆ ನಿರ್ಮಾಪಕಿ ಆಗುತ್ತಿದ್ದಾರೆ.
ಮದುವೆಗೆ ಕೆಲವೇ ದಿನಗಳ ಮುನ್ನ ಮಾಲಾಶ್ರೀ ಅಭಿನಯದ ಮಾರಕಾಸ್ತ್ರ ಚಿತ್ರದಲ್ಲಿ ನಟಿಸಿದ್ದ ಹರ್ಷಿಕಾ ಪೂಣಚ್ಚ, ಇದೀಗ ಬೋಜಪುರಿ ಚಿತ್ರದಲ್ಲಿ ರಿತೇಶ್ ಪಾಂಡೆ ಜೊತೆ ಅಭಿನಯಿಸುತ್ತಿದ್ದಾರೆ.