ಲೋಕಸಭೆ ಚುನಾವಣೆ ಬೆನ್ನಲ್ಲೆ ಗ್ಯಾರಂಟಿ ಸಮರ್ಪಕ ಜಾರಿಗೆ ಸರ್ಕಾರ ಕಸರತ್ತು ನಡೆಸುತ್ತಿದೆ. ರಾಜ್ಯದ ಜನತೆಗೆ `ಗ್ಯಾರಂಟಿ’ ಗುಡ್‍ನ್ಯೂಸ್ ಒಂದು ಸಿಕ್ಕಿದೆ.
ರಾಜ್ಯದಲ್ಲಿ ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಹಣ ವಿಳಂಬವಾಗುತ್ತಿದ್ದ ಬೆನ್ನಲ್ಲೇ ಫಲಾನುಭವಿಗಳಿಗೆ ಹಣ ತಲುಪಿಸೋಕೆ ನಿಗದಿತ ಡೆಡ್‍ಲೈನ್ ಅನ್ನು ಆರ್ಥಿಕ ಇಲಾಖೆ ನೀಡಿದೆ. ಆರ್ಥಿಕ ಇಲಾಖೆಯ ಡಿಡಿಓಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಈ ಮೂಲಕ ಹಣ ತಲುಪಲು ಪ್ರತಿ ತಿಂಗಳಲ್ಲೂ ದಿನಾಂಕ ಫಿಕ್ಸ್ ಮಾಡಲಾಗುತ್ತಿದೆ.
ಗೃಹಲಕ್ಷ್ಮಿ, ಅನ್ನಭಾಗ್ಯದ ಹಣ ಖಾತೆಗೆ ಜಮೆ ಆಗಲು ಇನ್ಮುಂದೆ ಡೆಡ್ ಲೈನ್ ಇರಲಿದೆ. ಅನ್ನ ಭಾಗ್ಯ ಹಾಗೂ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪ್ರತಿ ತಿಂಗಳ 20ಕ್ಕೆ ಹಾಕಲು ಆರ್ಥಿಕ ಇಲಾಖೆ ಸುತ್ತೋಲೆ ನೀಡಿದೆ. ಅನ್ನಭಾಗ್ಯದ ದುಡ್ಡನ್ನು 10-15 ದಿನಾಂಕದೊಳಗೆ ಪ್ರಕ್ರಿಯೆಗೆ ಸೂಚನೆ ನೀಡಲಾಗಿದೆ. ಹಾಗೆಯೇ ಗೃಹಲಕ್ಷ್ಮಿ ಹಣ ತಿಂಗಳ 15- 20 ರೊಳಗೆ ಜಮೆಗೆ ಸೂಚನೆ ನೀಡಲಾಗಿದೆ.