ಬಿಹಾರದಲ್ಲಿನ ಶೇ.42ರಷ್ಟು ಎಸ್ಸಿ/ಎಸ್ಟಿ ಸಮುದಾಯದ ಕುಟುಂಬಗಳು ಬಡವರಾಗಿದ್ದರೆ, ಶೇ.33ರಷ್ಟು ಹಿಂದುಳಿದ ವರ್ಗಗಳ ಕುಟುಂಬಗಳು ಬಡವರಾಗಿದ್ದಾರೆ ಎಂಬುದು ಇತ್ತೀಚೆಗೆ ಬಿಡುಗಡೆ ಆದ ಜಾತಿ ಗಣತಿ ವರದಿಯಲ್ಲಿ ಬಹಿರಂಗವಾಗಿದೆ.
ಜಾತಿ ಗಣತಿ ವರದಿಯ ಆರ್ಥಿಕ ಸ್ಥಿತಿ ಕುರಿತು ಎರಡನೇ ಹಂತದ ವರದಿ ಮಂಗಳವಾರ ಬಿಡುಗಡೆ ಆಗಿದ್ದು, ಬಿಹಾರದಲ್ಲಿನ ಒಟ್ಟಾರೆ ಶೇ.34 ರಷ್ಟು ಕುಟುಂಬಗಳ ಆದಾಯ ಮಾಸಿಕ 6000 ರೂ.ಗಿಂತ ಕಡಿಮೆ ಇವೆ.
ಎಸ್ಸಿ/ಎಸ್ಟಿ ಸಮುದಾಯದ ಶೇ.6ರಷ್ಟು ಮಕ್ಕಳು 11 ಮತ್ತು 12ನೇ ತರಗತಿಗೆ ವಿದ್ಯಾಭ್ಯಾಸ ಕೊನೆಗೊಳಿಸಿದ್ದಾರೆ. ಇದೀಗ ಅದು ಶೇ.9ಕ್ಕೆ ಏರಿಕೆಯಾಗಿದೆ.