ಸೂರ್ಯನ ಮೇಲಿನ ಸ್ಫೋಟದ ಮೊದಲ ಫೋಟೊವನ್ನು ಕಳುಹಿಸುವ ಮೂಲಕ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೊ) ಸೂರ್ಯನ ಅಧ್ಯಯನಕ್ಕೆ ಕಳುಹಿಸಿದ್ದ ಆದಿತ್ಯ ಎಲ್1 ಉಪಗ್ರಹ ಇತಿಹಾಸ ನಿರ್ಮಿಸಿದೆ.
ಸೂರ್ಯನ ಮೇಲಿನ ಸೋಲಾರ್ ವ್ಯವಸ್ಥೆಯ ಕುರಿತು ಅಧ್ಯಯನ ನಡೆಸಲು ತೆರಳಿರುವ ಆದಿತ್ಯ ಎಲ್ 1 ಉಪಗ್ರಹ ಅಕ್ಟೋಬರ್ 29ರಂದು ಸೆರೆಹಿಡಿದ ಸೂರ್ಯನ ಮೇಲಿನ ಅತ್ಯಂತ ಪ್ರಭಾವಿ ಸೋಲಾರ್ ಸ್ಫೋಟವನ್ನು ಸಂಪೂರ್ಣವಾಗಿ ಸೆರೆಹಿಡಿದಿದೆ.
ಸೂರ್ಯನ ಮೇಲಿನ ಸ್ಫೋಟದ ತೀವ್ರತೆ, ಪ್ರಭಾವ ಹಾಗೂ ಅದರ ಪರಿಣಾಮಗಳ ಕುರಿತು ವಿವರಗಳನ್ನು ಆದಿತ್ಯ ಎಲ್ 1 ಉಪಗ್ರಹ ಕಳುಹಿಸಿಕೊಟ್ಟಿದೆ. ಇದರ ಮೇಲೆ ಭಾರತೀಯ ವಿಜ್ಞಾನಿಗಳು ಅಧ್ಯಯನ ನಡೆಸಲಿದ್ದಾರೆ.