ಹುಬ್ಬಳ್ಳಿ: ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಹಳೇಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಪೊಲೀಸರು 12 ಜನರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇಲ್ಲಿನ ಅರವಿಂದನಗರ ಪಿ & ಟಿ ಕ್ವಾಟರ್ಸ್ ಪಾಳು ಬಿದ್ದ ಕಟ್ಟಡದಲ್ಲಿ ಗಾಂಜಾ ಮಾದಕ ಪದಾರ್ಥವನ್ನು ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಸಿಗುತ್ತಿದ್ದಂತೆಯೇ ಹಳೇಹುಬ್ಬಳ್ಳಿಯ ಪೊಲೀಸ್ ಠಾಣೆಯ ಪೋಲಿಸರು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಜು.24 ರಂದು ರಾತ್ರಿ 10.30 ಕ್ಕೆ ದಾಳಿ ಮಾಡಿದ್ದಾರೆ.
ಈ ವೇಳೆ ಹಳೇಹುಬ್ಬಳ್ಳಿ ಗೋಡಕೆ ಪ್ಲಾಟ್ ನಿವಾಸಿ ಅಭಿಷೇಕ ಹನಮಂತ, ಗಣೇಶಪೇಟೆಯ ಮಹ್ಮದ್ ಅಯಾಜ್, ಈಶ್ವರನಗರದ ಇಸ್ಮಾಯಿಲ್, ಆನಂದನಗರದ ಜಾಫರ್ ಅಲಿಯಾಸ್ ಬಾಂಬೆ ಜಾಫರ್, ಮಹಮ್ಮದ್ ಸಾಧೀಕ್, ರೋಶನ್ ಸೋಯಬ ಅಲಿಯಾಸ್ ಬಲ್ಲೂ ಜಮೀಲಾಹ್ಮದ್, ಸದರಸೋಪಾದ ಜುಬೇರಹ್ಮದ್, ಘೋಡಕೆ ಪ್ಲಾಟ್’ನ ಪುರಕಾನ್, ಅಜ್ಮೀರ್ ನಗರದ ಶಾನವಾಜ್, ಮೆಹಬೂಬನಗರದ ಸಲೀಂ, ಕರೀಂ ಬಂಧಿತರಾಗಿದ್ದಾರೆ. ಇವರಿಂದ ಒಟ್ಟು 1ಲಕ್ಷ ಮೌಲ್ಯದ 1 ಕೆಜಿ 365 ಗ್ರಾಂ ಗಾಂಜಾ, 2 ಸಾವಿರ ನಗದು, 3 ದ್ವಿ ಚಕ್ರ ವಾಹನ ಹಾಗೂ 9 ಮೊಬೈಲ್ ವಶಪಡಿಸಿಕೊಂಡು, ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಪಿಎಸ್ ಐ ಶಿವಾನಂದ ಬನ್ನಿಕೊಪ್ಪ, ರುದ್ರಪ್ಪ ಗುಡದಾರಿ, ಪಿಎಸ್ ಐ ರೂಪಕ್, ಎಎಸ್ಐ ಪಿಬಿಕಾಳೆ, ಸುನಿಲ್ ಸಿಬ್ಬಂದಿಗಳಾದ ಪಾಂಡೆ, ಎನ್ ಎಮ್ ಪಾಟೀಲ, ನಾಗರಾಜ ಕಿಂಚಣ್ಣನ್ವರ, ಕೃಷ್ಣ ಮೊಟೆಬೆನ್ನೂರ, ಸಂತೋಷ ವಲ್ಯಾಪೂರ, ವಿಠ್ಠಲ ಹೊಸಳ್ಳಿ ಸೇರಿದಂತೆ ಇತರರು ಭಾಗಿಯಾಗಿದ್ದರು.
ಗಾಂಜಾ ಮುಕ್ತ ಮಾಡಲು ಪಣ….
ಇನ್ನು ಈ ಪ್ರಕರಣದ ಬಗ್ಗೆ ಹು-ಧಾ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮಾತನಾಡಿದ್ದು, ಹು-ಧಾ ಪೊಲೀಸ್ ಕಮಿಷ್ನರೇಟ್ ವ್ಯಾಪ್ತಿಯ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಹಿತಿ ಮೇರೆಗೆ ದಾಳಿ ನಡೆಸಿ 12 ಜನರನ್ನು ಬಂಧಿಸಲಾಗಿದೆ. ಇವರಿಂದ 1.400 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಇವರಿಗೆ ರಾಜಸ್ತಾನ ಮೂಲದವರು ಗಾಂಜಾ ಮಾರಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಇದನ್ನು ಪರಿಶೀಲನೆ ಮಾಡಬೇಕು. ಒಟ್ಟಾರೆಯಾಗಿ ಹು-ಧಾ ಶಿಕ್ಷಣ ಕಾಶಿ ಎಂದು ಕರೆಸಿಕೊಳ್ಳುತ್ತದೆ. ಇದನ್ನು ಗಾಂಜಾ ಹಾವಳಿ ಮುಕ್ತ ಮಾಡಲು ಪಣತೊಡಲಾಗಿದೆ ಎಂದು ತಿಳಿಸಿದ್ದಾರೆ.