ಚಿಕ್ಕಬಳ್ಳಾಪುರ: ಯುಜಿಡಿ ಸಮಸ್ಯೆ ಎಂಬುದು ಬಿಟ್ಟು ಬಿಡದಂತೆ ಚಿಕ್ಕಬಳ್ಳಾಪುರ ನಗರದಲ್ಲಿ ಸಾರ್ವತ್ರಿಕ ಸಮಸ್ಯೆಯಾಗಿ ಪರಿಣಮಿಸಿದೆ. ಇನ್ನು 5ನೇ ವಾರ್ಡಿನಲ್ಲಿರುವ ಪೊಲೀಸ್ ವಸತಿ ಗೃಹಗಳಲ್ಲಿ ಕಳೆದ ಎರಡು ತಿಂಗಳಿನಿಂದ ಯುಜಿಡಿ ಕಟ್ಡಿಕೊಂಡು ಅಲ್ಲಿನ ನಿವಾಸಿಗಳಗೆ ತೀವ್ರ ಸಮಸ್ಯೆಯಾಗಿತ್ತು. ಸುಮಾರು 230 ಮನೆಗಳಿರುವ ಪೊಲೀಸ್ ವಸತಿ ಗೃಹಗಳಲ್ಲಿ ಯುಜಿಡಿ ಕಟ್ಟಿಕ್ಕೊಂಡು ಎರಡು ತಿಂಗಳು ನಗರಸಭೆಯಿಂದಲೂ ಪರಿಹರಿಸಲಾಗದೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು.
ಎರಡು ತಿಂಗಳ ಸತತ ಪ್ರಯತ್ನದ ಬಳಿಕ ಸಾಧ್ಯವಾಗದಿರುವುದನ್ನು ಕಂಡ ನಗರಸಭೆ ಆಯುಕ್ತರು ಮತ್ತು ಎಂಜಿನಿಯರ್ ಗಳು ಇದೀಗ ಯುಜಿಡಿಗೆ ಹೊಸ ಪೈಪ್ ಲೈನ್ ಹಾಕಲು ಮುಂದಾಗಿರುವುದು ನಿಜಕ್ಕೂ ಶ್ಲಾಘನೀಯ. ಇದರಿಂದ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ. ಪೊಲೀಸ್ ವಸತಿ ಗೃಹಗಳಲ್ಲಿ ಎದುರಾಗಿದ್ದ ಯುಜಿಡಿ ಸಮಸ್ಯೆ ಪರಿಹರಿಸಿದ ನಗರಸಭೆ ಆಯುಕ್ತರು ಮತ್ತು ಅಧಿಕಾರಿಗಳಿಗೆ ಅಭಿನಂದನೆಗಳ ಸುರಿಮಳೆಯೇ ಹರಿದಿದೆ.