ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 454 ಮಂದಿಯಲ್ಲಿ ಡೆಂಗ್ಯೂ ಪಾಸಿಟಿವ್ ದೃಢವಾಗಿದ್ದು, ಈ ಮೂಲಕ ಡೆಂಗ್ಯೂ ಸೋಂಕಿತರ ಸಂಖ್ಯೆ 16,492ಕ್ಕೆ ಏರಿಕೆಯಾಗಿದೆ.
572 ಮಂದಿ ಅನೇಕ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು. ಅದರಲ್ಲಿ 13 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಸ್ತುತ 10 ಮಂದಿ ಡೆಂಗ್ಯೂಯಿಂದ ಮೃತಪಟ್ಟಿದ್ದು, ಮರಣ ಪ್ರಮಾಣ ಶೇ.0.06ರಷ್ಟಿದೆ.
ಇನ್ನೂ ಬಿಬಿಎಂಪಿ ವ್ಯಾಪ್ತಿಯಲ್ಲಿ 210, ಬೆಂಗಳೂರು ನಗರ 35, ದಕ್ಷಿಣ ಕನ್ನಡ 27 ಕೇಸ್ ದಾಖಲಗಿದ್ದು, ಹಾವೇರಿ 26, ವಿಜಯಪುರ, ಬಾಗಲಕೋಟೆ 20, ಕಲಬುರಗಿ 17, ಚಿತ್ರದುರ್ಗ 15, ಹಾಸನ 13 ಪ್ರಕರಣ, ಕೋಲಾರ 11, ಧಾರವಾಡ 10,
ದಾವಣಗೆರೆ 8, ಕೊಪ್ಪಳ 7, ವಿಜಯನಗರ 6, ಬೀದರ್, ಚಿಕ್ಕಮಗಳೂರು, ಉಡುಪಿ, ಗದಗದಲ್ಲಿ ತಲಾ 4, ಯಾದಗಿರಿ, ಉತ್ತರ ಕನ್ನಡ, ಕೊಡಗು ಜಿಲ್ಲೆಯಲ್ಲಿ ತಲಾ ಒಂದು ಪ್ರಕರಣಗಳು ವರದಿಯಾಗಿವೆ.