ನಾಲೆ ಕಾಮಗಾರಿಯನ್ನ ವಿರೋಧಿಸಿ ಪ್ರತಿಭಟಿಸಿ ಮಾತನಾಡಿದ ರೈತರು ಕೆ.ಆರ್.ಪೇಟೆ.ತಾಲ್ಲೂಕಿನ ಕಿಕ್ಕೇರಿ ಉಪ ವಿಭಾಗ ವ್ಯಾಪ್ತಿಯಲ್ಲಿ ಬರುವ 54ನೇ ವಿತರಣಾ ನಾಲೆಯ ಒಟ್ಟು 30.30 ಕಿ.ಮೀ. ಉದ್ದವಿದ್ದು, ಕೆ. ಆರ್ ಪೇಟೆ ತಾಲ್ಲೂಕಿನ 18 ಗ್ರಾಮಗಳಲ್ಲಿ ಒಟ್ಟು 5373 ಎಕರೆ ಅಚ್ಚುಕಟ್ಟು ಪ್ರದೇಶವನ್ನು ಹೊಂದಿದ್ದು, ಈ ವಿತರಣಾ ನಾಲೆಯು 1984-85ರಲ್ಲಿ ನಿರ್ಮಾಣವಾದ ಹಳೆಯ ನಾಲೆಯಾಗಿದ್ದರಿಂದ ಏರಿ ದುರ್ಬಲಗೊಂಡು ಹಾಗೂ ಸೈಜು ಕಲ್ಲಿನಿಂದ ನಿರ್ಮಿಸಿದ್ದ ಅಡ್ಡಮೋರಿಗಳು ಸಹ ಶಿಥಿಲಗೊಂಡ ಕಾರಣ,
ಪೂರ್ಣ ಪ್ರಮಾಣದ ಅಚ್ಚುಕಟ್ಟಿಗೆ ನೀರನ್ನು ಒದಗಿಸಲಾಗದ ಕಾರಣ ನಾಲ ಅವಲಂಬಿತ ರೈತರು ಕಳೆದ 20 ವರ್ಷಗಳಿಂದ ಮನವಿ ಹಾಗೂ ಹೋರಾಟಗಳನ್ನು ಪರಿಗಣಿಸಿ ಹಾಗೂ ರೈತ ಬಾಂಧವರು ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ಭಾವಿಸಿ ಈ ಭವಣೆಯನ್ನು ನೀಗಿಸಲು ಹಿಂದಿನ ಸರ್ಕಾರದ ಮಾಜಿ ಸಚಿವರಾದ ಡಾ. ಕೆ.ಸಿ. ನಾರಾಯಣಗೌಡರ ಅವಧಿಯಲ್ಲಿ ನಾಲೆಯ ಆಧುನಿಕರಣ ಹಾಗೂ ಅಭಿವೃದ್ಧಿಗಾಗಿ ರೂ. 55.00 ಕೋಟಿ ಅನುದಾನ ಬಿಡುಗಡೆ ನೀಡಿ ಎರಡು ವರ್ಷಗಳ ಹಿಂದೆಯೇ ಗುದ್ದಲಿ ಪೂಜೆ ನೆರವೇರಿಸಿ ಈ ಮಹತ್ವಾಕಾಂಕ್ಷೆ ಯೋಜನೆಯ ಅನುಷ್ಠಾನ ಇಷ್ಟರೊಳಗೆ ಸಮರ್ಪಕವಾಗಿ ರೈತರಿಗೆ ಹಾಗೂ ಸಾರ್ವಜನಿಕರಿಗೆ ಸದ್ಬಳಿಕೆ ಆಗಬೇಕಿದ್ದ ಕಾಮಗಾರಿ ಅಧಿಕಾರಿಗಳ ಬೇಜವಾಬ್ದಾರಿಯೂ….? ಅಥವಾ ಗುತ್ತಿಗೆದಾರನಿಗೆ ಹಣದಾಸೆಯೋ….? ತಿಳಿದಿಲ್ಲ ಎರಡು ವರ್ಷಗಳಿಂದಲೂ ಆಮೆಗತಿಯಲ್ಲಿ ಕಳಪೆ ಮತ್ತು ಹವಾಯಿಜ್ಞಾನಿಕ ಕಾಮಗಾರಿಯ ಮೂಲಕ ಸಾಗುತ್ತಿದೆ. ಆದರೆ ನಾಲೆ ಅಭಿವೃದ್ಧಿಯಾದರೆ ನೆಮ್ಮದಿಯಿಂದ ಜೀವನ ಸಾಗಿಸಲು ಅನುಕೂಲವಾಗುತ್ತದೆ ಎಂದು ಹಗಲು ಇರುಳು ಕನಸು ಕಾಣುತ್ತಿದ್ದ ಮುಗ್ಧ ರೈತರ ಬದುಕಿಗೆ ಸರ್ಕಾರದ ಅನುಮೋದಿಸಿರುವ ನೀಲಿ ನಕ್ಷೆಯ ಮೂಲಕ ಗುಣಮಟ್ಟದ ಕಾಮಗಾರಿಗೆ ಹೆಚ್ಚು ಹೊತ್ತು ನೀಡಿ ದಾರಿದೀಪವಾಗಬೇಕಿದ್ದ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಮನಸೋ ಇಚ್ಛೆ ಕಳಪೆ ಮತ್ತು ಅವಿಜ್ಞಾನಿಕ ಕಾಮಗಾರಿಯ ಮೂಲಕ ರೈತರ ಬದುಕಿಗೆ ಚಪ್ಪಡಿ ಕಲ್ಲು ಹೇಳಿದ್ದಾರೆ ಎಂದು ದೂರಿದರು.
ಬಹುಕೋಟಿ ವೆಚ್ಚದಲ್ಲಿ ಪ್ರಸ್ತುತ ಮಾಡುತ್ತಿರುವ ಕಾಮಗಾರಿ ಬಹುತೇಕ ಹಳೆಯ ಕಾಮಗಾರಿಯ ಸಾಮಗ್ರಿಗಳಾದ ಕಲ್ಲು, ಮಣ್ಣು, ಬಳಸುತ್ತಾ ಸೂಕ್ತ ನೀರಿನ ನಿರ್ವಹಣೆ( ಕ್ಯೂರಿಂಗ್) ಇಲ್ಲದ ಕಾರಣ ಕೆಲವೇ ಕೆಲವು ದಿನಗಳಲ್ಲೇ ಕಾಂಕ್ರೀಟ್ ಬಿರುಕು ಬಿಟ್ಟಿದೆ ಎಂದರೆ ಈ ಕಾಮಗಾರಿ ಎಂತಹ ಗುಣಮಟ್ಟ ಕಾಮಗಾರಿಯಾಗಿ ಜರುಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ರೈತರು ಇಂತಹ ಕಳಪೆ ಮತ್ತು ಅವೈಜ್ಞಾನಿಕ ಕಾಮಗಾರಿಯ ಬಗ್ಗೆ ಕಂಡರೂ ಕುರುಡರಂತಾಗಿರುವ ಸಂಬಂಧಪಟ್ಟ ಅಧಿಕಾರಿಗಳು ನಡೆ ನೋಡಿದರೆ ಗುತ್ತಿಗೆದಾರ ಹಾಗೂ ಅಧಿಕಾರಿಗಳು ಸಮನ್ವಯದಲ್ಲಿ ಹಣ ಮಾಡಲು ಸಲುವಾಗಿ ಕಳಪೆ ಮತ್ತು ಅವೈಜ್ಞಾನಿಕ ಕಾಮಗಾರಿ ಜರುಗುತ್ತಿದೆ ಎಂಬ ಅನುಮಾನ ಕಾಡುತ್ತಿದೆ ಎಂದು ಗಂಭೀರವಾಗಿ ಆರೋಪಿಸಿ ಸರ್ಕಾರ ಮತ್ತು ಜಿಲ್ಲಾಡಳಿತ ಶೀಘ್ರವೇ ಮಧ್ಯಪ್ರವೇಶಿಸಿ ಸಂಬಂಧಪಟ್ಟ ಗುತ್ತಿಗೆದಾರರನ್ನ ಕಪ್ಪು ಪಟ್ಟಿಗೆ ಸೇರಿಸಿ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಗುಣಮಟ್ಟದ ಕಾಮಗಾರಿಯ ಮೂಲಕ ಈ ಭಾಗದ ರೈತರನ್ನು ರಕ್ಷಿಸಬೇಕು ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲು ಸಿದ್ಧರಿದ್ದೇವೆ ಎಂದು ರೈತರು ತಮ್ಮ ತಲೆಯ ಮೇಲೆ ಕಲ್ಲು ಒತ್ತಿ ಪ್ರತಿಭಟನೆ ನಡೆಸಿ. ಹೋರಾಟದ ಎಚ್ಚರಿಕೆ ನೀಡಿದರು.