ಕಂದಾಯ ನೌಕರರು ಶೋಷಿತರ ಬಾಳಿಗೆ ಬೆಳಕಾಗಬೇಕು.ಆದರೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕುರ್ಡಿ ಹೋಬಳಿಯ ಕಂದಾಯ ನಿರೀಕ್ಷಕ ಮಹೇಶ್ ಪಾಟೀಲ್ ಹಣ ತಿಂದು ಅರೋಲಿ ಗ್ರಾಮದ ಯಲ್ಲಮ್ಮಳಿಗೆ ಮಾಡಬೇಕಾದ ಜಮೀನು ಖಾತೆ ಮಟಮಾರಿ ಗ್ರಾಮದ ಬಜಾರಮ್ಮಳಿಗೆ ಜಮೀನು ಖಾತೆ ಮಾಡಿರುವುದು ಬೆಳಕಿಗೆ ಬಂದಿದೆ.
ನನ್ನ ತಾಯಿಯ ಸರ್ವೆ ನಂಬರ್ 104 ರ 1 ಎಕರೆ 2ಗುಂಟೆ ಜಮೀನು ಬಜಾರಮ್ಮಳಿಗೆ ಯಾಕೆ ಖಾತೆ ಮಾಡಿ ವರ್ಗಾವಣೆ ಮಾಡಿದ್ದೀರಾ ಎಂದು ಯಲ್ಲೇಶ ಕಂದಾಯ ನಿರೀಕ್ಷಕ ಮಹೇಶ್ ಪಾಟೀಲರನ್ನ ಕೇಳಿದರೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಏನಾದರಜ ಮಾಡಿಕೋ ಎಂದು ಅವಾಜ್ ಹಾಕಿದ ಹಿನ್ನೆಲೆಯಲ್ಲಿ ಮಾನ್ವಿ ಠಾಣೆಯಲ್ಲಿ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ.
ಕಂತ್ರಿ ಕಂದಾಯ ನಿರೀಕ್ಷಕ ಮಹೇಶ್ ಪಾಟೀಲ್ ವಿರುದ್ಧ ಪ್ರಕರಣ ದಾಖಲಾಗಿ ದಿನಗಳೆ ಕಳೆದರು ಸಹ ರಾಯಚೂರು ಜಿಲ್ಲಾಡಳಿತ ಅಮಾನತು ಮಾಡಿಲ್ಲ ಹಾಗು ಮಾನ್ವಿ ಪೊಲೀಸ್ ಇಲಾಖೆ ಮಹೇಶ್ ಪಾಟೀಲರನ್ನ ಬಂಧಿಸಿಲ್ಲ ಎಂದು ಸಾಮಾಜಿಕ ಕಾರ್ಯಕರ್ತರ ಆರೋಪವಾಗಿದೆ.