ಮನೆಯ ಯಜಮಾನಿಯರಿಗೆ ಗೃಹಲಕ್ಷ್ಮಿ ಯೋಜನೆ (gruhalakshmi scheme)ಯು ನಮ್ಮ ಕರ್ನಾಟಕದಲ್ಲಿ ಬಹಳ ಜನಪ್ರಿಯತೆ ಕಾರಣವಾಗಿದೆ ಹಾಗೂ ಎಲ್ಲಾ ಮಹಿಳೆಯರು ಈ ಯೋಜನೆಯನ್ನು ತುಂಬಾನೇ ಇಷ್ಟಪಡುತ್ತಿದ್ದು ಆದರೀಗ ಕಳೆದ ಕೆಲ ತಿಂಗಳಿನಿಂದ ಯಜಮಾನಿಯರ ಖಾತೆಗೆ ಹಣ ವರ್ಗಾವಣೆಯಾಗದಿರುವುದು ಹೆಂಗಳೆಯರ ಕೆಂಗಣ್ಣಿಗೆ ಗುರಿಯಾಗಿತ್ತು ಅದೇ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಯತ್ನಾಳ್ ಅವರು ಬೆಳಗಾವಿ ಜಿಲ್ಲೆ ಅಥಣಿಯಲ್ಲಿ ಹೆಬ್ಬಾಳ್ಕರನ್ನು ಹಾಸ್ಯಮಾಡಿ ಮಾತನಾಡಿದ್ದರು..
ಭಾಗ್ಯ ಲಕ್ಷ್ಮಿಯ 2000 ರೂ. ದುಡ್ಡು ಕುಡವ್ವಾ ಇಲ್ಲಂದ್ರ ಮನಿಗಿ ಹೋಗವ್ವ ಎನ್ನುವ ಮಾತನ್ನು ಹೊರಚುಮ್ಮಿದ್ದು ಆದರೀಗ ಯಜಮಾನಿಯರ ಖಾತೆಗೆ ತಡೆಹಿಡಿದಿದ್ದ ಗೃಹಲಕ್ಷ್ಮಿಯನ್ನು ಜಮಾ ಮಾಡಿ, *ಏಳರಾಗ ಯಾರ್ ಹುಟ್ಟಿಲ್ಲ..! ಕಿವಿಮ್ಯಾಲ್ ಯಾರ್ ಹೂ ಇಟ್ಕೊಂಡಿಲ್ಲ..! ಎಂದೂ , ಯತ್ನಾಳ್ ಅವರ ಹೇಳಿಕೆಗೆ ಲಕ್ಷ್ಮಿ ಹೆಬ್ಬಾಳ್ಕರ್ ನೇರವಾಗಿ ಟಾಂಗ್ ಕೊಟ್ಟಿದ್ದಾರೆ..