ಹುಬ್ಬಳ್ಳಿ: ಅವ್ರೆಲ್ಲ ತಮ್ಮ‌ಜೀವನಕ್ಕಾಗಿ ಹತ್ತಾರು ವರ್ಷಗಳಿಂದ ಸೂರಿನ‌ ಕನಸು‌ ಕಂಡವರು.‌ ಜೀವನಕ್ಕಾಗಿ ಸ್ವಂತ ನೆಲೆಯ ಕನಸು ಕಂಡ ಆ ಗ್ರಾಮದ ಜನರಿಗೆ ನಿವೇಶನ ಕಲ್ಪಿಸಿಕೊಡುವುದಾಗಿ ನಂಬಿಸಿದ ಆ ಗ್ರಾಮದ ಸೊಸೈಟಿ ಹಾಗೂ ಗ್ರಾಮ‌ಪಂಚಾಯಿತಿ ಕಳೆದ 23 ವರ್ಷಗಳಿಂದ ಅವರ ಕನಸಿಗೆ ಕೊಳ್ಳಿ ಇಟ್ಟಿದೆ. ಏನದು ನಿವೇಶನದ ಕನಸು ಹೊತ್ತ ಕುಳಿತ ಆ ಗ್ರಾಮಸ್ಥರ ಗೋಳಿನ‌ ನೋವು ಅಂತಾ ಹೇಳ್ತೀವಿ ನೋಡಿ…..

ಎಸ್. ಹೀಗೆ ತಲೆ ಮೇಲೆ ಕೈಹೊತ್ತು ದೇವಸ್ಥಾನದಲ್ಲಿ ಕುಳಿತ ಇವ್ರೆಲ್ಲ ಹುಬ್ಬಳ್ಳಿ ತಾಲೂಕಿನ ಹೆಬಸೂರಿನ ಗ್ರಾಮಸ್ಥರು. ಕಳೆದ 2003 ಹಾಗೂ 2004 ರಲ್ಲಿ ಇವ್ರಿಗೆಲ್ಲ ಗ್ರಾಮದ ಹೊರವಲಯದಲ್ಲಿ ಖಾಲಿ‌ನಿವೇಶನ ಸೌಲಭ್ಯ ಕಲ್ಪಿಸಿಕೊಡುವುದಾಗಿ ನಂಬಿಸಿ ಗ್ರಾಮದ‌ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದಂತಹ ಅಶೋಕ ಮಂಡಗಿನಹಾಳ ಹಾಗೂ ಸೊಸೈಟಿ‌ ಅಧ್ಯಕ್ಷರಾದಂತಹ ಗೋವಿಂದಪ್ಪ ಸೋಮಪ್ಪ ನೆಲವಡಿ ಕಾರ್ಯದರ್ಶಿಗಳಿಂದ ಪ್ರತಿಯೊಬ್ಬರಿಂದ ತಲಾ 5 ಸಾವಿರದಂತೆ ಹಣ ವಸೂಲಿ ಮಾಡಿದ್ದಾರೆ.‌ ಸುಮಾರು 150 ಕ್ಕೂ‌ಅಧಿಕ ಫಲಾನುಭವಿಗಳಿಂದ ಈ ರೀತಿ ಹಣ ಪಾವತಿ ಮಾಡಿಸಿಕೊಂಡಿದ್ದಾರೆ.

ಆದ್ರೆ ಅಂದುಕೊಂಡಂತೆ ಎಲ್ಲವೂ ಆಗಿದ್ದಿದ್ರೆ ಇವ್ರೆಲ್ಲ ತಮ್ಮ‌ಪಾಡಿಗೆ ತಾವು ಪಡೆದ ನಿವೇಶನಗಳಲ್ಲಿ ಸ್ವಂತ ಮನೆ ನಿರ್ಮಾಣ ಮಾಡಿಕೊಂಡು ಜೀವನ ನಡೆಸಬೇಕಿತ್ತು.‌ಆದ್ರೆ ಬರೋಬ್ಬರಿ 23 ವರ್ಷ ಕಳೆದರೂ ಇವ್ರ ಬಳಿ 5 ಸಾವಿರ ರೂಪಾಯಿ ಪಡೆದ ಗ್ರಾಮ ಪಂಚಾಯಿತಿ ಹಾಗೂ ಸೊಸೈಟಿ ಸದಸ್ಯರು ಇಷ್ಟು ವರ್ಷ ಕಳೆದರೂ ಪತ್ತೆ ಇಲ್ಲ.

ಅಲ್ದೇ ಈ ಗ್ರಾಮಸ್ಥರ ನಿವೇಶನ‌ಕ್ಕಾಗಿ ಮೀಸಲಿಟ್ಟಿದ್ದ ಸುಮಾರು ಎಕರೆ ಜಾಗ ಇದೀಗ ವೈಯಕ್ತಿಕ ಸ್ವ ಹಿತಾಸಕ್ತಿಗಳ ಪಾಲಾಗಿದೆ ಅನ್ನೋದು ಇವ್ರ ಆರೋಪ. ಇಪ್ಪತ್ಮೂರು ವರ್ಷಗಳು ಕಳೆದರೂ ನಿವೇಶನದ ಆಸೆ ಹೊತ್ತು ಕುಳಿತಿರುವ ಈ ಬಡ ಫಲಾನುಭವಿಗಳಿಗೆ ಈವರೆಗೂ ನಿವೇಶನ‌ಮಾತ್ರ ಧಕ್ಕಿಲ್ಲ. ಇನ್ನು ಆ ಸಂದರ್ಭ ನಿವೇಶನಕ್ಕಾಗುವ ಹಣ ತುಂಬಿದ ಪ್ರತಿಯಿಂದು ದಾಖಲೆ ಹಿಡಿದು ಪಂಚಾಯಿತಿಗೆ ಅಲೆದರೂ ಇವ್ರ ನೋವಿಗೆ ಮಾತ್ರ ಯಾರೂ ಸ್ಪಂದಿಸುತ್ತಿಲ್ಲ.

ಹೀಗಾಗಿ ಇದೀಗ ಈ‌ ಗ್ರಾಮಸ್ಥರೆಲ್ಲ ಅಂದು ಅಧಿಕಾರದಲ್ಲಿದ್ದ ಪಂಚಾಯಿತಿ ಹಾಗೂ ಕಾರ್ಯದರ್ಶಿಗಳ ವಿರುದ್ಧ ಸಿಡೆದೆದ್ದಿದ್ದು, ಈಗಿರುವ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳಿಗೆ ಅಂಗಲಾಚುತ್ತಿದ್ದಾರೆ.‌ ಅಲ್ದೇ ಈ ಗ್ರಾಮಸ್ಥರಿಗೆ ಸೇರಬೇಕಿದ್ದ ನಿವೇಶನಗಳು ಯಾವ ಕಂಡವರ ಪಾಲಾಗಿವೆ ಅನ್ನೋದು ಮಾತ್ರ ಇನ್ನೂ ನಿಗೂಢವಾಗಿದ್ದು, ಬಡಜನತೆಯ ಕನಸಿಗೆ‌ಕೊಳ್ಳಿ‌ ಇರಿಸಿರುವ ಆ ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ಯಾಕೆ ಕ್ರಮಗಳಾಗುತ್ತಿಲ್ಲ ಅನ್ನೋದು ಇಡೀ‌ ಗ್ರಾಮಸ್ಥರಲ್ಲಿ ಹಲವು ಅನುಮಾನಕ್ಕೆ ಕಾರಣವಾಗಿದ್ದು, ಇನ್ನಾದ್ರೂ ನಮಗೆ ಸಲ್ಲಬೇಕಿದ್ದ ನಿವೇಶನಗಳು ಪಟ್ಟಭದ್ರ ಹಿತಾಸಕ್ತಿಗಳಿಂದ ಮುಕ್ತಿ‌ಕೊಡಿಸಿ ನಮಗೆ ನಿವೇಶನದ ವ್ಯವಸ್ಥೆ ಮಾಡಿಕೊಡಬೇಕು‌ ಅಂತಾ ಹೆಬಸುರಿನ ಗ್ರಾಮಸ್ಥರು ಅಂಗಲಾಚುತ್ತಿದ್ದಾರೆ.

Leave a Reply

Your email address will not be published. Required fields are marked *