ಹಣಕ್ಕಾಗಿ ಉದ್ಯಮಿಗಳನ್ನು ಅಪಹರಿಸಿ ಹಣ ಸುಲಿಗೆ ಮಾಡುತ್ತಿದ್ದ ಕುಖ್ಯಾತ ಅಂತಾರಾಜ್ಯ ಪ್ರಕರಣಗಳಲ್ಲಿ ಭಾಗಿಯಾಗಿರುವ 7 ಮಂದಿಯನ್ನು ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕುಶಾಲ್ ಚೌಕ್ಸೆ ರವರು ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಆರೋಪಿಗಳ ವಿವರ ಹಾಗೂ ಪ್ರಕರಣಗಳ ಮಾಹಿತಿ ನೀಡಿದರು.ಬಂಧಿತ ಆರೋಪಿಗಳನ್ನು ಚಿಕ್ಕಬಳ್ಳಾಪುರ ನಗರದ ಬರ್ಕತ್ ವುಲ್ಲಾ, ಬೆಂಗಳೂರು ನಗರದ ಬಿಟಿಎಂ ಲೇಔಟ್ ನ ಲೋಹಿತ್ ಕುಮಾರ್, ಪ್ರವೀಣ ಅಲಿಯಾಸ್ ನೇಪಾಳಿ, ಕೋಲಾರದ ರಾಮಸಂದ್ರದ ಸಂತೋಷ್, ಕೋಲಾರದ ಚಿನ್ನಾಪುರದ ವೆಂಕಟೇಶ್, ಬೆಂಗಳೂರಿನಎ.ಜೆ.ಕಾಲೋನಿಯ ಮಾರುತಿ ಪ್ರಸನ್ನ, ಬೆಂಗಳೂರಿನ ಹುಳಿಮಾವು ಭರತ್ ಕುಮಾರ್ ಎಂದು ಗುರುತಿಸಲಾಗಿದೆ.

ಆರೋಪಿಗಳಿಂದ 41 ಲಕ್ಷ ರೂ, ನಗದು, ನಾಲ್ಕು ಕಾರು, ಒಂದು ಚಿನ್ನದ ಸರ, ವಿವಿಧ ಕಂಪನಿಯ ಮೊಬೈಲ್ ಗಳನ್ನು ವಶಕ್ಕೆ ಪಡೆದಿದ್ದಾರೆ.ಬಂಧಿತ ಆರೋಪಿಗಳಲ್ಲಿ ಕೆಲವರು ಕೋಲಾರದ ಮಾಜಿ ಸಚಿವ ವರ್ತೂರು ಪ್ರಕಾಶ್ ರವರ ಅಪಹರಣ ಪ್ರಕರಣದಲ್ಲಿ ಕೂಡ ಭಾಗಿಯಾಗಿದ್ದರು. ಅಲ್ಲದೇ ರಾಜ್ಯದ ವಿವಿಧ ಕಳುವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಬಂಧಿತರಲ್ಲಿ ಪ್ರವೀಣ್ ಅಲಿಯಾಸ್ ನೇಪಾಳಿ ಹಾಗೂ ಲೋಹಿತ್ ಕುಮಾರ್ ಪ್ರಮುಖರಾಗಿದ್ದಾರೆ ಎಂದು ಎಸ್ಪಿ ಕುಶಾಲ್ ಚೌಕ್ಸೆ ಮಾಹಿತಿ ನೀಡಿದರು.

Leave a Reply

Your email address will not be published. Required fields are marked *