ವಿಜಯಪುರ ಮಹಾನಗರ ಪಾಲಿಕೆಯಲ್ಲಿ ಡಾ, ಬಾಬಾಸಾಹೇಬರ ಅಂಬೇಡ್ಕರ್ ಮೂರ್ತಿಯನ್ನು ತೆಗೆದಿದ್ದನು ಖಂಡಿಸಿ ವಿವಿಧ ದಲಿತಪರ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನೂತನ ನಗರಸಭೆ ಕಟ್ಟಡದ ಪ್ರವೇಶದ್ವಾರದ ಕಟ್ಟೆಯ ಮೇಲೆ ವಿವಿಧ ದಲಿತಪರ ಸಂಘಟನೆಗಳ ಸಮ್ಮುಖದಲ್ಲಿ ಬಾಬಾಸಾಹೇಬರ ಮೂರ್ತಿಯನ್ನ ಇಡಲಾಗಿತ್ತು.
ಇನ್ನೂ ಮಹಾನಗರ ಪಾಲಿಕೆಯ ಅಧಿಕಾರಿಗಳು ದಿಢೀರನೆ ಬಾಬಾಸಾಹೇಬರ ಮೂರ್ತಿಯನ್ನ ತೆಗೆದು ಹಾಕಿರುವ ಮೂಲಕ ಬಾಬಾಸಾಹೇಬರಗೆ ಅವಮಾನ ಮಾಡಿದ್ದಾರೆ ಕೂಡಲೇ ನಗರ ಅಧಿಕಾರಿಗಳು ಬಾಬಾಸಾಹೇಬರ ಮೂರ್ತಿಯನ್ನ ಅದೇ ಸ್ಥಳದಲ್ಲಿ ಇಟ್ಟು ಬಾಬಾಸಾಹೇಬರಗೆ ಗೌರವ ಸಲ್ಲಿಸಬೇಕು ಎಂದು ಆಗ್ರಹಿಸಿ ನಗರಸಭೆ ಆವರಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಆಗ್ರಹಿಸಲಾಯಿತು.