ಪುನರ್ಕಾಲದಿಂದಲೂ ದೇವಾನು ದೇವತೆಗಳ ವಿಗ್ರಹಗಳನ್ನು ಕೆತ್ತನೆ ಮಾಡಿವುದು, ದೇವಾಲಯಗಳನ್ನು ನಿರ್ಮಾಣ ಮಾಡುವುದು ಈ ರೀತಿಯಾಗಿ ನಮ್ಮ ಹಿಂದೂ ಧರ್ಮದಲ್ಲಿ ಸಂಪ್ರದಾಯ ಬೆಳೆದುಕೊಂಡು ಬಂದಿದೆ. ಇನ್ನೂ ಕೆಲವರು ಮನುಷ್ಯರಿಗಾಗಿ ಅವರ ಭಾವ-ಭಕ್ತಿಗೆ ಅನುಗುಣವಾಗಿ ವಿಗ್ರಹಗಳನ್ನು ಪ್ರತಿಷ್ಟಾಪನೆ ಮಾಡುತ್ತಿರುತ್ತಾರೆ.ಅದೇ ರೀತಿಯಾಗಿ ಇಲ್ಲೊಬ್ಬ ವ್ಯಕ್ತಿ ಅನ್ಯಲೋಕದರುವ ಏಲಿಯನ್ ಎಂದು ಹೇಳಲ್ಪಡುವ ಅನ್ಯ ಗ್ರಹ ಜೀವಿಯ ದೇವಾಲಯವನ್ನು ನಿರ್ಮಾಣ ಮಾಡಿದ್ದಾನೆ. ತಮಿಳುನಾಡಿನ ಸೇಲಂ ನಲ್ಲಿರುವ ವ್ಯಕ್ತಿಯೊಬ್ಬ ಏಲಿಯನ್ ದೇವಾಲಯವನ್ನು (Alien Temple) ನಿರ್ಮಾಣ ಮಾಡಿದ್ದು. ಅಷ್ಟಕ್ಕೂ ಆತ ಈ ದೇವಾಲಯ ನಿರ್ಮಾಣ ಮಾಡಲು ಕಾರಣವೇನು ಎಂಬುದನ್ನು ತಿಳಿಯಲು ಓದುವುದನ್ನು ಮುಂದುರೆಸಿ.
ತಮಿಳುನಾಡಿನ ಸೇಲಂ ವ್ಯಾಪ್ತಿಯ ಮಲ್ಲಮೂಪಂಬಟ್ಟಿಯ ನಿವಾಸಿಯಾದ ಲೋಗನಾಥನ್ ಎಂಬುವವರು ಅವರ ಜಮೀನಿನಲ್ಲಿ ಅನ್ಯಗ್ರಹ ಜೀವಿಯ ದೇವಾಲಯವನ್ನು ನಿರ್ಮಾಣ ಮಾಡಿದ್ದು ನಿಜಕ್ಕೂ ಅಚ್ಚರಿಯ ಸಂಗತಿ, ಅಲ್ಲಿ ಏಲಿಯನ್ ವಿಗ್ರಹವನ್ನು (Alien Temple) ಪ್ರತಿಷ್ಟಾಪನೆ ಮಾಡಿದ್ದಾರೂ ಯಾಕೆ ಅನ್ನೋ ಪ್ರಶ್ನೆಗೆ ಲೋಗನಾಥನ್ ಅವರ ಉತ್ತರ ಹೀಗಿತ್ತು.
ಈ ದೇವರು ಭೂಲೋಕದ ತನ್ನ ಭಕ್ತರನ್ನು ನೈಸರ್ಗಿಕ ವಿಕೋಪಗಳಿಂದ ರಕ್ಷಿಸುವ ಶಕ್ತಿ ಹೊಂದಿದ್ದಾರೆ ಎಂದು ಲೋಗನಾಥನ್ ತಿಳಿಸಿದ್ದಾರೆ. ಲೋಗನಾಥನ್ ತಮ್ಮ ಮುಕ್ಕಾಲು ಎಕರೆಯ ಭೂಮಿಯಲ್ಲಿ ಅನ್ಯಗ್ರಹ ದೇವರನ್ನು ಪ್ರತಿಷ್ಠಾಪಿಸಿದ್ದಾರೆ, ಅಲ್ಲದೇ ಜೊತೆಗೆ ತಾನು ಅನ್ಯಗ್ರಹ ಜೀವಿಗಳೊಂದಿಗೆ ಮಾತನಾಡಿದ್ದೇನೆ ಹಾಗೂ ಈ ದೇವಾಲಯ ನಿರ್ಮಾಣ ಮಾಡಲು ಅವರಿಂದ (Alien Temple) ಸೂಚನೆ ಪಡೆದಿದ್ದೇನೆ ಎಂದು ಹೇಳಿದ್ದಾರೆ .
ಇನ್ನೂ ಅನ್ಯಗ್ರಹ ದೇವರುಗಳಲ್ಲದೇ ಶಿವ, ಪಾರ್ವತಿ, ಮುರುಗನ್, ಕಾಳಿ ಸೇರಿದಂತೆ ಹಲವು ದೇವ-ದೇವತೆಗಳ ವಿಗ್ರಹಳನ್ನು ಜಮೀನಿನಲ್ಲಿಯೇ ನೆಲದಿಂದ 11 ಅಡಿ ಕೆಳಗಿರುವ ನೆಲಮಾಳಿಗೆಯಲ್ಲಿ ದೇವಾಸ್ಥಾನವನ್ನು ಸ್ಥಾಪಿಸಲಾಗಿದೆಯಂತೆ. ನೈಸರ್ಗಿಕ ವಿಕೋಪಗಳು ಹೆಚ್ಚುತ್ತಿರುವಾಗ ಅವುಗಳನ್ನು ತಡೆಯುವ ಶಕ್ತಿ ಅನ್ಯಗ್ರಹ ಜೀವಿಗಳಿಗೆ ಇದೆ ಎಂದು ದೇಗುಲದ (Alien Temple) ನಿರ್ಮಾಣ ಮಾಡಿದ ಲೋಗನಾಥನ್ ರವರ ಬಲವಾದ ನಂಬಿಕೆಯಂತೆ. ಬಾಳೆಯ ಎಲೆಯನ್ನು ದೇಹಕ್ಕೆ ಸುತ್ತಿಕೊಂಡರೇ ಅನ್ಯಗ್ರಹ ಜೀವಿಗಳ ವಿಕರಣದಿಂದ ಪಾರಾಗಬಹುದು ಎಂದೂ ಸಹ ಲೋಗನಾಥನ್ ಹೇಳಿದ್ದಾರೆ. ಇನ್ನೂ ಈ ದೇಗುಲದ ನಿರ್ಮಾಣದ ಕಾರ್ಯ ಇನ್ನೂ ನಡೆಯುತ್ತಿದೆ, ಆದರೂ ದಿನನಿತ್ಯ ಈ ದೇವಾಲಯಕ್ಕೆ ಹೆಚ್ಚು ಜನರು ಭೇಟಿ ನೀಡುತ್ತಿರುವುದಂತೂ ಸತ್ಯ, ಜೊತೆಗೆ ಈ ದೇವಾಲಯದ ಕುರಿತು ದೊಡ್ಡ ಚರ್ಚೆ ಸಹ ಎಲ್ಲೆಡೆ ಶುರುವಾಗಿದೆ.