ಸರಣಿ ಭೂಕುಸಿತ ಸಂಭವಿಸಿದ ವಯನಾಡಿನಲ್ಲಿ ನಾಪತ್ತೆಯಾಗಿರುವ ಜನರಿಗಾಗಿ ಎನ್‌ಡಿಆರ್‌ಎಫ್, ನೌಕಾಪಡೆ, ಕೇರಳ ಪೊಲೀಸ್ ಮತ್ತು ಕೇರಳ ಅರಣ್ಯ ಇಲಾಖೆ ಸೇರಿದಂತೆ ಸೇನಾ ಸಿಬ್ಬಂದಿ ಮತ್ತು ಇತರ ಪಡೆಗಳು ಭಾನುವಾರ(ಆ.04)ಶೋಧ ಕಾರ್ಯವನ್ನು ಪುನರಾರಂಭಿಸಿವೆ. ಅಧಿಕೃತ ದಾಖಲೆಗಳ ಪ್ರಕಾರ, ಮುಂಡಕ್ಕೆ ಮತ್ತು ಚೂರಲ್ಮಲಾದಿಂದ 206 ಜನರು ಇನ್ನೂ ಕಾಣೆಯಾಗಿದ್ದಾರೆ. ಏತನ್ಮಧ್ಯೆ, ಚಾಲಿಯಾರ್ ನದಿಯ ದಡದಿಂದ ಇನ್ನೆರಡು ಮೃತ ದೇಹಗಳನ್ನು ಪತ್ತೆ ಹಚ್ಚಿದ ನಂತರ ಭಾನುವಾರ ಸಾವಿನ ಸಂಖ್ಯೆ 359 ಕ್ಕೆ ತಲುಪಿದೆ.
ಗುಡ್ಡಗಾಡು ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಒಟ್ಟು 1,208 ಮನೆಗಳು ನಾಶವಾಗಿವೆ ಎಂದು ತಿಳಿದುಬಂದಿದೆ. ಈ ಪೈಕಿ ಮುಂಡಕ್ಕೆಯಲ್ಲಿ 540, ಚೂರಲ್‌ಮಳದಲ್ಲಿ 600 ಮತ್ತು ಅಟ್ಟಮಳದಲ್ಲಿ 68 ಮನೆಗಳಿವೆ.
ಭೂಕುಸಿತದಲ್ಲಿ ಸುಮಾರು 3700 ಎಕರೆ ಕೃಷಿ ಭೂಮಿ ಕೊಚ್ಚಿ ಹೋಗಿದ್ದು, 21.111 ಕೋಟಿ ರೂಪಾಯಿ ಬೆಳೆ ನಷ್ಟವಾಗಿದೆ. ರಾಜ್ಯ ಸರ್ಕಾರದ ಪ್ರಕಾರ, ಈ ಪ್ರದೇಶದ ಒಟ್ಟು 49 ಮಕ್ಕಳು ಭೂಕುಸಿತದಲ್ಲಿ ಕಾಣೆಯಾಗಿದ್ದಾರೆ. ಅವರಲ್ಲಿ ಕೆಲವರು ವೆಳ್ಳರಿಮಲ ಜಿವಿಎಚ್‌ಎಸ್‌ಎಸ್‌ನಲ್ಲಿ ವಿದ್ಯಾರ್ಥಿಗಳಾಗಿದ್ದರು. ನಾಪತ್ತೆಯಾಗಿರುವ ವಿದ್ಯಾರ್ಥಿಗಳಲ್ಲಿ ಎಷ್ಟು ಮಂದಿ ತಮ್ಮ ಸಂಸ್ಥೆಯವರು ಎಂಬುದನ್ನು ಶಾಲಾ ಅಧಿಕಾರಿಗಳು ಇನ್ನೂ ಪತ್ತೆ ಹಚ್ಚಿಲ್ಲ.