ಕಾರವಾರ ಉತ್ತರ ಕನ್ನಡ ಜಿಲ್ಲೆಯಕುಮಟಾ ತಾಲೂಕಿನಲ್ಲಿ ನೆರೆಹಾವಳಿಯಿಂದ ತೊಂದರೆಗೆ ಒಳಗಾದವರಿಗೆ ಖಾಯಂ ತಹಶೀಲ್ದಾರ್ ಇಲ್ಲದೇ ಪರಿಹಾರ ನೀಡುವಲ್ಲಿ ತೀರಾ ತೊಂದರೆ ಉಂಟಾಗುತ್ತಿದೆ. ತಾಕೂಕಿನಲ್ಲಿ 272 ಮನೆ ಭಾಗಶಃ ಹಾನಿಯಾಗಿದೆ. 70 ಮನೆ ಸಂಪೂರ್ಣ ಕುಸಿತವಾಗಿದೆ.
ಈ ಹಿಂದೆ ನಮ್ಮ ಸರ್ಕಾರ ಇದ್ದ ಅವಧಿಯಲ್ಲಿ ಸತತ ಎರಡು ವರ್ಷ ನೆರೆಹಾವಳಿಗೆ ತುತ್ತಾದವರಿಗೆ ಮಾನ್ಯ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು ಮತ್ತು ಬಸವರಾಜ ಬೊಮ್ಮಾಯಿ ರವರು ಮನೆಗಳಿಗೆ ನೀರು ನುಗ್ಗಿದವರಿಗೆ ತಲಾ 10,000/- ಸಾವಿರ ರೂ ನೀಡಿದ್ದೇವೆ. ಪ್ರತಿ ವರ್ಷ 3000 ಮನೆಗಳಂತೆ ಎರಡು ವರ್ಷ ನೆರೆಯಲ್ಲಿ ಒಟ್ಟೂ 6000 ಮನೆಗೆ ನೀಡಿದ್ದೇವೆ. ಎಂದು ಕುಮಟಾ ಶಾಸಕ ದಿನಕರ್ ಶೆಟ್ಟಿ ಹೇಳಿದ್ದಾರೆ ಅವರು ಕುಮಟಾ ಆಡಳಿತ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಾ ಈ ವಿಷಯ ತಿಳಿಸಿದ್ದಾರೆ
ಆದರೆ ಈ ಸರ್ಕಾರದ ಅವಧಿಯಲ್ಲಿ ಈ ವರೆಗೆ ಮನೆಗಳಿಗೆ ನೀರು ನುಗ್ಗಿದ 34 ಜನರಿಗೆ ಮಾತ್ರ ತಲಾ 5000/- ರೂ ಜಮಾ ಆಗಿದೆ. ಉಳಿದವರಿಗೆ ಹಣ ಜಮಾ ಮಾಡಲು ಜಿಲ್ಲಾಡಳಿತ ವಿಫಲವಾಗಿದೆ.
ಖಾಯಂ ತಹಶೀಲ್ದಾರ್ ಇಲ್ಲದ ಕಾರಣ ಕನಿಷ್ಟ ಐದು ಸಾವಿರ ಕೂಡ ಜಮಾ ಮಾಡಿಲ್ಲ ಸರ್ಕಾರ ಏನು ಮಾಡುತ್ತಿದೆ. ಎಂದು ಶಾಸಕರು ಪ್ರಶ್ನೆ ಮಾಡಿದ್ದಾರೆ
ಎ.ಐ.ಸಿ.ಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ ಜನಪ್ರಿಯ ಸರ್ಕಾರದ ಅಸ್ಥಿರತೆಗೆ ಪ್ರಯತ್ನಿಸಲಾಗುತ್ತಿದೆ ಎನ್ನುತ್ತಿದ್ದಾರೆ. ಇವರು ಏನು ದಂಡ್ ಕಡಿದಿದ್ದಾರೆ. ಯಾವ ರೀತಿಯ ಜನಪ್ರಿಯತೆ ತಿಳಿಯಬೇಕಾಗಿದೆ. ಈಗಾಗಲೇ ಮೂಡಾ ಹಗರಣದ ಬಗ್ಗೆ ಜನರ ಗಮನಕ್ಕೆ ತಂದಿದ್ದೇವೆ. ಮನೆ ಕಳೆದುಕೊಂಡವರಿಗೆ ಸಹ ಈ ವರೆಗೆ ಹಣ ಕೊಟ್ಟಿಲ್ಲ ಆದರೆ ಜನ ಸಹಿಸಿಕೊಂಡಿದ್ದಾರೆ ಎಂದರು.
ವಿಶೇಷವಾಗಿ ಬಿಜೆಪಿ ಶಾಸಕರಿದ್ದ ಕಡೆಗಳಲ್ಲಿ ಸಮಸ್ಯೆಗಳಾಗುತ್ತಿವೆ ಬೇರೆ ತಾಲೂಕಿನ ತಹಶೀಲ್ದಾರರಿಗೆ ಚಾರ್ಜ್ ಕೊಟ್ಟಿದ್ದಾರೆ ಇಲ್ಲಿಯವರಿಗೆ ಏಕೆ ಕೊಟ್ಟಿಲ್ಲ ಎಂಬ ಮಾಧ್ಯಮ ಪ್ರತಿನಿಧಿಗಳಿಗೆ ಉತ್ತರಿಸುತ್ತಾ ಇದರಲ್ಲಿ ನಮ್ಮಯಾವುದೇ ವಿಫಲತೆ ಇಲ್ಲ ಸರ್ಕಾರದ ಜವಾಬ್ದಾರಿ ಅದು. ನಾನು ಈ ಬಗ್ಗೆ ಅಧಿವೇಷನದಲ್ಲಿ ಮಾತನಾಡಿ ಗಮನ ಸೆಳೆಯುತ್ತೇನೆ. ಖಾಯಂ ತಹಶೀಲ್ದಾರ್ ಇಲ್ಲದೇ ಕುಮಟಾ ತಾಲೂಕಿನಲ್ಲಿ ಅವ್ಯವಸ್ಥೆ ಆಗುತ್ತಿದೆ ಬನ್ನಿ ಆಮೇಲೆ ಮಾಡುತ್ತೇನೆ ಈ ವಿಷಯ ಉಸ್ತುವಾರಿ ಸಚಿವರ ಗಮನಕ್ಕೆ ಸಹ ತರುತ್ತೇನೆ ಎಂದರು. ಶಾಸಕ ದಿನಕರ ಶೆಟ್ಟಿ ಹೇಳಿದ್ದಾರೆ