ಭಾರತವು ಆಹಾರ ಧಾನ್ಯಗಳು, ಹಣ್ಣುಗಳು, ತರಕಾರಿಗಳು, ಹತ್ತಿ, ಸಕ್ಕರೆ ಮತ್ತು ಚಹಾದಲ್ಲಿ ಎರಡನೇ ಅತಿದೊಡ್ಡ ಉತ್ಪಾದಕವಾಗಿದೆ ಎಂದು 32 ನೇ ಅಂತರರಾಷ್ಟ್ರೀಯ ಕೃಷಿ ಅರ್ಥಶಾಸ್ತ್ರಜ್ಞರ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ.

ಅಂತಾರಾಷ್ಟ್ರೀಯ ಕೃಷಿ ಅರ್ಥಶಾಸ್ತ್ರಜ್ಞರ ಸಂಘವು (ಆ.3) ಶನಿವಾರ ಆಯೋಜಿಸಿದ್ದ ತ್ರೈವಾರ್ಷಿಕ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ , ಜಗತ್ತಿನ ಸೂಪರ್​ ಫುಡ್​ಗಳ ಬುಟ್ಟಿಯಲ್ಲಿ ಭಾರತದ ಪಾಲನ್ನು ಹಂಚಿಕೊಳ್ಳಲು ಬಯಸುತ್ತದೆ. ಜಗತ್ತಿನಲ್ಲಿಯೇ ಅತಿ ಹೆಚ್ಚು ಸಿರಿಧಾನ್ಯ(ಮಿಲ್ಲೆಟ್​) ಉತ್ಪಾದಿಸುವ ದೇಶ ಭಾರತವಾಗಿದೆ. ಜಗತ್ತು ಇದನ್ನು ಸ್ಪೆಷಲ್ ಮತ್ತು ಸೂಪರ್​ ಫುಡ್​ ಎಂದು ಕರೆಯುತ್ತದೆ. ವ್ಯವಸ್ಥೆಯನ್ನು ಪರಿವರ್ತಿಸುವ ಚರ್ಚೆಗಳಿಗೆ ಭಾರತದ ಅನುಭವವು ಮೌಲ್ಯಯುತವಾಗಿದೆ ಮತ್ತು ಖಂಡಿತವಾಗಿಯೂ ಜಾಗತಿಕ ಪ್ರಯೋಜನವನ್ನು ನೀಡುತ್ತದೆ ಎಂದು ಹೇಳಿದರು. 65 ವರ್ಷಗಳ ನಂತರ ಭಾರತ ಎರಡನೇ ಬಾರಿಗೆ ಸಮ್ಮೇಳನವನ್ನು ಆಯೋಜಿಸುತ್ತಿದ್ದು. 65 ವರ್ಷಗಳ ಹಿಂದೆ ಆಹಾರ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಸವಾಲುಗಳನ್ನು ಎದುರಿಸುತ್ತಿರುವ ಹೊಸ ಸ್ವತಂತ್ರ ರಾಷ್ಟ್ರದಿಂದ ಭಾರತವು ಈಗ ಆಹಾರದ ಹೆಚ್ಚುವರಿ ದೇಶವಾಗಿದೆ, ಹಾಲು, ಬೇಳೆಕಾಳುಗಳು ಮತ್ತು ಸಾಂಬಾರ್ ಪದಾರ್ಥಗಳ ಅತಿದೊಡ್ಡ ಉತ್ಪಾದಕ ಮತ್ತು ಆಹಾರ ಧಾನ್ಯ, ಹಣ್ಣುಗಳು, ತರಕಾರಿಗಳ ಎರಡನೇ ಅತಿದೊಡ್ಡ ಉತ್ಪಾದಕವಾಗಿದೆ ಎಂದು ಪ್ರಧಾನಿ ಮೋದಿ ಹೆಮ್ಮೆ ಪಟ್ಟರು. ,

ಕಳೆದ ಬಾರಿ ಭಾರತದಲ್ಲಿ ಸಮ್ಮೇಳನ ನಡೆದ ಸಂದರ್ಭದಲ್ಲಿ ದೇಶದ ಆಹಾರ ಭದ್ರತೆ ವಿಶ್ವಕ್ಕೆ ಆತಂಕ ತಂದೊಡ್ಡಿದ್ದರೆ ಇಂದು ಭಾರತ ಜಾಗತಿಕ ಆಹಾರ ಮತ್ತು ಪೌಷ್ಠಿಕ ಭದ್ರತೆಗೆ ಪರಿಹಾರ ನೀಡುತ್ತಿದೆ ಎಂದರು. “ಆದ್ದರಿಂದ, ಆಹಾರ ವ್ಯವಸ್ಥೆಯ ರೂಪಾಂತರದ ಚರ್ಚೆಗಳಿಗೆ ಭಾರತದ ಅನುಭವವು ಮೌಲ್ಯಯುತವಾಗಿದೆ ಮತ್ತು ಖಂಡಿತವಾಗಿಯೂ ತುಂಬಾ ಪ್ರಯೋಜನವನ್ನು ನೀಡುತ್ತದೆ” ಎಂದು ನರೇಂದ್ರ ಮೋದಿ ಹೇಳಿದರು.

Leave a Reply

Your email address will not be published. Required fields are marked *