ತಿರುವನಂತಪುರಂ: ವಿಪತ್ತು ಪೀಡಿತ ವಯನಾಡ್‌ಗೆ ಹೊಸ ಭೀತಿಯೊಂದು ಎದುರಾಗಿದ್ದು, ಕೈಬಿಟ್ಟ ಮನೆಗಳಿಂದ ಬೆಲೆಬಾಳುವ ವಸ್ತುಗಳನ್ನು ಕದಿಯುವ ಕಳ್ಳರು ಸ್ವಯಂಸೇವಕರಂತೆ ನಟಿಸುತ್ತಿದ್ದಾರೆ.

ಭೂಕುಸಿತದ ನಂತರ ಜನರನ್ನು ಹೊರಹಾಕಿದ ಕೆಲವು ಮನೆಗಳಲ್ಲಿ ಕಳ್ಳತನದ ಘಟನೆಗಳು ವರದಿಯಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಪ್ರದೇಶದಲ್ಲಿ ನಿಗಾ ಇರಿಸಲು ಆರು ಕಳ್ಳತನ ನಿಗ್ರಹ ದಳಗಳನ್ನು ರಚಿಸಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಈ ಪ್ರದೇಶಕ್ಕೆ ಸ್ವಯಂಸೇವಕರಂತೆ ನಟಿಸುವ ಜನರ ಪ್ರವೇಶವನ್ನು ನಿರ್ಬಂಧಿಸಲು ಸರ್ಕಾರ ನಿರ್ಧರಿಸಿದೆ. ಭಾನುವಾರದಿಂದ ಭೂಕುಸಿತ ಪ್ರದೇಶಗಳಿಗೆ ತೆರಳಲು ಬಯಸುವ ಹೊರಗಿನವರಿಗೆ ನೋಂದಣಿಯನ್ನು ಕಡ್ಡಾಯಗೊಳಿಸಲಾಗಿದೆ.

ಆಡಳಿತವು ಹೆಚ್ಚು ಹಾನಿಗೊಳಗಾದ ಚೂರಲ್ಮಲಾ ಮತ್ತು ಮುಂಡಕ್ಕೈ ಗ್ರಾಮಗಳ ಸಮೀಪವಿರುವ ಮನೆಗಳಲ್ಲಿ ವಾಸಿಸುತ್ತಿದ್ದ ಜನರನ್ನು ಪರಿಹಾರ ಶಿಬಿರಗಳಿಗೆ ಅಥವಾ ಇತರ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಅಂತಹ ಮನೆಗಳನ್ನೇ ಕಳ್ಳರು ಟಾರ್ಗೆಟ್ ಮಾಡಿಕೊಂಡು ಕಳ್ಳತನ ಮಾಡುತ್ತಿದ್ದಾರೆ ಎನ್ನಲಾಗಿದೆ. ಬೈಲಿ ಸೇತುವೆ ನಿರ್ಮಾಣವಾದ ಸ್ಥಳದ ಸಮೀಪದ ಮನೆಯೊಂದರಲ್ಲಿಯೂ ಸಹ ಕಳ್ಳತನವಾಗಿದೆ.

“ಭೂಕುಸಿತದ ಸಮಯದಲ್ಲಿ ನಮ್ಮ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನಾವು ನಮ್ಮ ಮನೆಗಳನ್ನು ತ್ಯಜಿಸಿದ್ದೇವೆ. ಆದರೆ ಅದರ ನಂತರ ನಮ್ಮ ಮನೆಯ ಸ್ಥಿತಿಯನ್ನು ಪರಿಶೀಲಿಸಲು ನಾವು ಹಿಂತಿರುಗಿದಾಗ, ಬಾಗಿಲು ಮುರಿದು ತೆರೆದಿರುವುದನ್ನು ನಾವು ಕಂಡುಕೊಂಡಿದ್ದೇವೆ. ಸದ್ಯ ಅವರು ತಂಗಿರುವ ರೆಸಾರ್ಟ್‌ನಲ್ಲಿರುವ ಅವರ ಕೊಠಡಿಯನ್ನು ಕೂಡ ಕಳ್ಳರು ಗುರಿಯಾಗಿಸಿಕೊಂಡು ಅವರ ಬಟ್ಟೆಗಳನ್ನು ಕದ್ದೊಯ್ದಿದ್ದಾರೆ ಎಂದು ದೂರಿದರು.

ಇದರಿಂದಾಗಿ ರಾತ್ರಿ ವೇಳೆ ಕಳ್ಳತನ ಮಾಡುವ ಉದ್ದೇಶದಿಂದ ಈ ಪ್ರದೇಶಕ್ಕೆ ನುಗ್ಗುವವರನ್ನು ಗುರುತಿಸಿ ಶಿಕ್ಷಿಸಬೇಕು ಎಂದು ಸಂತ್ರಸ್ತ ಕೆಲವರು ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *