.ಸೆಲ್ಫಿ ಹುಚ್ಚಿಗೆ ಯುವತಿಯೊಬ್ಬಳು 100 ಅಡಿ ಪ್ರಪಾತಕ್ಕೆ ಬಿದ್ದು ಅದೃಷ್ಟವಶಾತ್ ಬದುಕುಳಿದ ಘಟನೆ ದೃಶ್ಯ ಸಮೇತವಾಗಿ ಸೆರೆ ಹಿಡಿಯಲಾಗಿದೆ. ಸೆಲ್ಫಿ ಕ್ಲಿಕ್ಕಿಸುವಾಗ ಈ ಅವಾಂತರ ನಡೆದಿದೆ. ಅನ್ವಿ ಕಾಮ್ದಾರ್ ಸಾವಿನ ಬಳಿಕ ಮತ್ತೊಂದು ದುರ್ಘಟನೆ ಇದಾಗಿದೆ.
ಶನಿವಾರ ಪುಣೆಯಿಂದ ಕೆಲವರು ತೊನೆಘರ್ ಜಲಪಾತವನ್ನು ನೋಡಲು ಹೋಗಿದ್ದರು, ಅಲ್ಲಿ ನಸ್ರೀನ್ ಅಮೀರ್ ಖುರೇಷಿ (21) ಎಂಬ ಯುವತಿ ಬೋರ್ನ್ ಘಾಟ್‌ನಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ಆಯತಪ್ಪಿ 100 ಅಡಿ ಆಳದ ಪ್ರಪಾತಕ್ಕೆ ಬಿದ್ದಿದ್ದಾಳೆ ತಕ್ಷಣವೇ ಅವಳ ಸ್ನೇಹಿತರೆಲ್ಲ ಸಹಾಯಕ್ಕಾಗಿ ಕಿರುಚಾಡತೊಡಗಿದ್ದಾರೆ ಇದನ್ನು ಕಂಡ ಸ್ಥಳೀಯರು ಹಾಗೂ ಗೃಹರಕ್ಷಕರು ನೆರವಿಗೆ ಧಾವಿಸಿದ್ದು ಹಗ್ಗವೊಂದನ್ನು ಬಿಟ್ಟು ಆಕೆಗೆ ಹಗ್ಗವನ್ನು ಹಿಡಿದುಕೊಳ್ಳಲು ಹೇಳಿ ನಂತರ ಸುರಕ್ಷಿತವಾಗಿ ರಕ್ಷಕ ಸಿಬ್ಬಂದಿ ಹಾಗೂ ಯುವತಿ ಹಗ್ಗಹಿಡಿದು ಹತ್ತುತ್ತಿರುವುದು ಜೊತೆಗೆ ಆ ಯುವತಿ ಅಭಿ ಅಭಿ ಎಂದು ನೋವಿನಿಂದ, ಭಯದಿಂದ ಅರಚುತ್ತಿರುವುದನ್ನು ವೀಡ್ಯೋ ಮುಖಾಂತರ ಕಾಣಬಹುದಾಗಿದೆ, ಸುರಕ್ಷಿತವಾಗಿ ಮೇಲ್ಬಂದ ಯುವತಿಗೆ ಹಲವಾರು ಪೆಟ್ಟು ಗಾಯಗಳಾಗಿದ್ದು ಆಕೆಯನ್ನು,ಚಿಕಿತ್ಸೆಗಾಗಿ ಸತಾರಾ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸತಾರಾದಲ್ಲಿ ಭಾರೀ ಮಳೆಯಿಂದಾಗಿ, ಆಗಸ್ಟ್ 2 ರಿಂದ 4 ರವರೆಗೆ ಪ್ರವಾಸಿಗರಿಗೆ ಪ್ರವೇಶಕ್ಕೆ ಅನುಮತಿ ನೀಡದಂತೆ ಸ್ಥಳಗಳನ್ನು ಮುಚ್ಚುವಂತೆ ಡಿಎಂ ಆದೇಶಿಸಿದ್ದರು, ಆದರೆ ಕೆಲವು ಪ್ರವಾಸಿಗರು ಇಲ್ಲಿಗೆ ತಲುಪುವ ಮೂಲಕ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿರುವುದು ವಿಪರ್ಯಾಸ.