ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದ
ಆರಾಧ್ಯ ದೈವ ಬಸವೇಶ್ವರ ಜಾತ್ರೆಯ ಅಂಗವಾಗಿ ಒಂದು ತಿಂಗಳಕಾಲ ನಡೆಯುವ ಪ್ರವಚನ ಕಾರ್ಯಕ್ರಮಕ್ಕೆ ಚಾಲನೆಯನ್ನ ನೀಡಲಾಯಿತು.

ಬಸವೇಶ್ವರ ದೇವಾಲಯ ಅಂತರಾಷ್ಟ್ರೀಯ ಶಾಲೆ ಆವರಣದಲ್ಲಿರುವ ಶ್ರೀ ನಂದೀಶ್ವರ ರಂಗ ಮಂದಿರದಲ್ಲಿ ಪೂಜ್ಯ ಶಿವಕುಮಾರ ಸ್ವಾಮೀಜಿಗಳ ಅಮೃತವಾಣಿಯಿಂದ ಬಸವಾದಿ ಪ್ರಮಥರ ವಚನ ಚಿಂತನ ಪ್ರವಚನ ಜರುಗಿತು. ಈ ಪ್ರವಚನದಲ್ಲಿ ಶಿವಕುಮಾರ ಸ್ವಾಮೀಜಿಯವರು ಜಾತಿ ಪಂಥಗಳನ್ನು‌ ಮೀರಿ ಮನುಕುಲದವರು ಬಸವಣ್ಣನವರನ್ನು ಸ್ಮರಣೆ ಮಾಡಿ ಎಂಬ ಹಿತವಚನವನ್ನು ನೀಡಿದರು

ಕಾರ್ಯಕ್ರಮದಲ್ಲಿ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಸೇರಿದಂತೆ ಜಾತ್ರಾ ಉತ್ಸವ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *