ತಿರುವನಂತಪುರಂ: ವಯನಾಡಿನ ಭೂಕುಸಿತ ಪೀಡಿತ ಪ್ರದೇಶಗಳಲ್ಲಿ ವಾಸಿಸುವ ಗ್ರಾಹಕರಿಗೆ ಕೆಎಸ್ಇಬಿ (ಕೇರಳ ರಾಜ್ಯ ವಿದ್ಯುತ್ ಮಂಡಳಿ) ಆರು ತಿಂಗಳವರೆಗೆ ವಿದ್ಯುತ್ ಶುಲ್ಕವನ್ನು ವಿಧಿಸುವುದಿಲ್ಲ ಎಂದು ವಿದ್ಯುತ್ ಸಚಿವ ಕೆ ಕೃಷ್ಣನ್ಕುಟ್ಟಿ ಮಂಗಳವಾರ ತಿಳಿಸಿದ್ದಾರೆ.
ಮೆಪ್ಪಾಡಿ ಪಂಚಾಯಿತಿಯ 10, 11 ಮತ್ತು 12 ನೇ ವಾರ್ಡ್ಗಳಾದ ಚೂರಲ್ಮಲಾ ಎಕ್ಸ್ಚೇಂಜ್, ಚೂರಲ್ಮಲಾ ಟವರ್, ಮುಂಡಕ್ಕೈ, ಕೆ.ಕೆ.ನಾಯರ್, ಅಂಬೇಡ್ಕರ್ ಕಾಲೋನಿ, ಅಟ್ಟಮಲ ಮತ್ತು ಅಟ್ಟಮಲ ಪಂಪ್ ಟ್ರಾನ್ಸ್ಫಾರ್ಮರ್ಗಳನ್ನು ಒಳಗೊಂಡಂತೆ ವಾಸಿಸುವ ಗ್ರಾಹಕರಿಗೆ ಆರು ತಿಂಗಳವರೆಗೆ ಉಚಿತ ವಿದ್ಯುತ್ ಸರಬರಾಜು ಮಾಡಲಾಗುತ್ತದೆ ಎಂದು ಸ್ಪಷ್ಟ ಪಡಿಸಿದರು.
ಈ ಪ್ರದೇಶಗಳಲ್ಲಿ ವಾಸಿಸುವ ಗ್ರಾಹಕರಿಂದ ವಿದ್ಯುತ್ ಬಿಲ್ ಬಾಕಿ ಉಳಿದಿದ್ದರೆ ಅದನ್ನು ವಸೂಲಿ ಮಾಡದಂತೆ ಮಂಡಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವರು ಹೇಳಿಕೆ ಕೊಟ್ಟಿದ್ದು. ಈ ನಿರ್ಧಾರದಿಂದ ಸುಮಾರು 1,139 ಗ್ರಾಹಕರು ಪ್ರಯೋಜನ ಪಡೆಯಲಿದ್ದಾರೆ ಎಂದು ಕೆಎಸ್ಇಬಿ ತನ್ನ ಸಮೀಕ್ಷೆಯ 385 ಮನೆಗಳು ಭೂಕುಸಿತದಿಂದ ನಾಶವಾಗಿದೆ ಎಂದು ತಿಳಿಸಿದೆ.