Viral Video: ಯಾರಿಗೆಲ್ಲ ಬೇಕು ಈ ಬೌಲ್​ ಕಟ್​, ಎಲ್ಲಾ ಸಾಲಾಗಿ ಬನ್ರಿ
  1. Hair cut : ಕೊರೊನಾ (Corona) ಸಂದರ್ಭದಲ್ಲಿ ಹೇರ್​ ಕಟ್​ನ ಆವಿಷ್ಕಾರಗಳು ರೀಲ್ ರೂಪದಲ್ಲಿ ಹೆಚ್ಚೆಚ್ಚು ಕಾಣಿಸಿಕೊಳ್ಳತೊಡಗಿದವು. ಹಾಸ್ಯದ ಲೇಪವುಳ್ಳದ್ದರಿಂದ ಅತಿವೇಗದಲ್ಲಿ ಜನಪ್ರಿಯಗೊಂಡವು. ಅವುಗಳಿಂದ ಪ್ರಭಾವಿತರಾದ ಜನರು ತಮ್ಮ ಕೂದಲನ್ನು ತಾವೇ ಕತ್ತರಿಸಿಕೊಳ್ಳತೊಡಗಿದರು. ಕೆಲವರು ಹೆಂಡತಿಯ ಕೂದಲು ಕತ್ತರಿಸಿದರು, ಇನ್ನೂ ಹಲವರು ಗಂಡನ ಕೂದಲು ಕತ್ತರಿಸಿದರು. ಮಕ್ಕಳ ಕೂದಲನ್ನು ಕತ್ತರಿಸಿದರು. ವಯಸ್ಸಾದ ತಂದೆಗೆ ಅನೇಕ ಹೆಣ್ಣುಮಕ್ಕಳು ಶೇವ್ ಹೇರ್ ಕಟ್ ಕೂಡ ಮಾಡಿದರು. ಒಟ್ಟಿನಲ್ಲಿ ಯಾವುದನ್ನು ಯಾರು ಮಾಡಬಾರದು ಎಂದು ಸಮಾಜ ಹೇಳುತ್ತಿತ್ತೋ ಅದೆಲ್ಲವೂ ಕೊರೊನಾ ನೆಪದಲ್ಲಿ ಸಾಧ್ಯವಾಯಿತು. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಬೌಲ್​ ಕಟ್​ ಇನ್​ ಹೋಮ್​ಸಲೂನ್​!?

ಅಯ್ಯೋ ಇದನ್ನು ನೋಡಿ ತಲೆ ಕೆಡುತ್ತಿದೆ ಎಂದು ಒಬ್ಬರು ಬೇಸರಪಟ್ಟುಕೊಳ್ಳುತ್ತಿದ್ದಾರೆ. ಅಮ್ಮ ಮಾಡಿದ ಈ ಉಪಾಯ ಮುದ್ದಾಗಿಲ್ಲವೆ, ಯಾಕೆ ಹಾಗೆ ಹೇಳುತ್ತಿದ್ದೀರಿ ಎಂದು ಇನ್ನೊಬ್ಬರು ಕೇಳುತ್ತಿದ್ದಾರೆ. ಈ ಮಗು ಇಷ್ಟೊಂದು ಶಾಂತವಾಗಿ ಕುಳಿತಿದೆಯೆಂದರೆ ಕಾರ್ಟೂನ್ ನೆಟ್​ವರ್ಕ್ ನೋಡುತ್ತಿದೆ ಎಂದರ್ಥ ಎಂದು ಮತ್ತೊಬ್ಬರು ಹೇಳಿದ್ಧಾರೆ.

ಈಕೆ ಈ ಐಡಿಯಾ ಅನ್ನು ಚೀನಾದ ಅನಾಥಾಶ್ರಮಗಳಿಂದ ಪಡೆದುಕೊಂಡಿದ್ದಾಳೆ. ಅಲ್ಲಿ ಕಟ್ಟಿಗೆಯ ಬಟ್ಟಲನ್ನು ಉಪಯೋಗಿಸುತ್ತಾರೆ ಎಂದು ಒಬ್ಬರು ಹೇಳಿದ್ದಾರೆ. ಇದು ಕಟೋರಿ ಕಟಿಂಗ್​? ಎಂದು ಅನೇಕರು ತಮಾಷೆ ಮಾಡಿದ್ದಾರೆ. ನನ್ನ ಹೆಂಡತಿ ಈ ವಿಡಿಯೋ ಅನ್ನು ಈಗಷ್ಟೇ ತೋರಿಸಿದಳು, ಹೀಗೆ ಆಕೆ ನನ್ನ ಮೇಲೆ ಪ್ರಯೋಗಿಸದಿದ್ದರೆ ಸಾಕು ಎಂದು ಮತ್ತೊಬ್ಬರು ಹೇಳಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?