ಕಾರವಾರ ಉತ್ತರ ಕನ್ನಡ ಜಿಲ್ಲೆಯಲ್ಲಿ ತಲ್ಲಣ ಗೊಳಿಸಿದ್ದ ಸಿರ್ಸಿ ತಾಲೂಕಿನ ಮಳಲ್ಗಾವ್ ಅರಣ್ಯದಲ್ಲಿ ನಡೆದ ದರೋಡೆ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ, ಈ ಪ್ರಕರಣದಲ್ಲಿ ಐವರು ಆರೋಪಿಗಳು ಸೇರಿದಂತೆ , ದೋಚಿದ್ದ 9ಲಕ್ಷ ಹಣದ ಪೈಕಿ ಸುಮಾರು 7 ಲಕ್ಷ 63 ಸಾವಿರ ರೂಪಾಯಿಗಳು ಹಾಗೂ ಮೂರು ಬೈಕ್ ಗಳನ್ನು ವಶಪಡಿಸಿಕೊಳ್ಳುವಲ್ಲಿ ಪೋಲಿಸರು ಯಶಸ್ವಿಯಾಗಿದ್ದಾರೆ
ಈ ಪ್ರಕರಣದ ಪ್ರಮುಖ ರೂಪುಗಳಾದ ಶಿವಮೊಗ್ಗ ಜಿಲ್ಲೆಯ ನಾಗಪ್ಪ, ದೊಡ್ಡನಾರಾಯಣ, ಕೋರ್ಚರ್ ಅವಿನಾಶ್, ಕೊಟ್ರೇಶ್ ನಿಸ್ಸಾರಮ್ಮ, ಮೊಹಮ್ಮದ್ ಜಾಫರ್ ಬಳಗ, ಸಂಜು ಕೆ ಆರ್ ರಾಮಣ್ಣ ಕೋರ್ಚರ್ ,ಹಾಗೂ ಕೃಷ್ಣಪ್ಪ ಯಾನೆ ಕೃಷ್ಣಮೂರ್ತಿ ನಾಯ್ಕ್ ,ಬಂದಿತ ಆರೋಪಿಗಳಾಗಿದ್ದಾರೆ ಎಸ್ ಪಿ ಎಂ ನಾರಾಯಣ್ ಹಾಗೂ ವಿಜಯಕುಮಾರ್ ಮಾರ್ಗದರ್ಶನದಲ್ಲಿ ನಡೆದ ಹಾಗೂ ಡಿವೈಎಸ್ಪಿ ಗಣೇಶ್ ಕೆ ಎಲ್ ಮತ್ತು ಸಿಪಿಐ ಶಶಿಕುಮಾರ್ ವರ್ಮಾ ಇವರು ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆಂದು ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ಅವರು ವಿವರಿಸಿದ್ದಾರೆ.