ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಪಾರ್ಕಿಂಗ್ ಸಮಸ್ಯೆ ನಿಜಕ್ಕೂ ಸಾಕಷ್ಟು ತಲೆನೋವಾಗಿದೆ. ಇದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಆದರೆ ಈಗ ಪಾಲಿಕೆಯು ಪೊಲೀಸ್ ಇಲಾಖೆಯ ಸಹಭಾಗಿತ್ವದಲ್ಲಿ ವಿನೂತನ ಕಾರ್ಯಕ್ಕೆ ಮುಂದಾಗಿದ್ದು, ಬೇಕಾಬಿಟ್ಟಿಯಾಗಿ ವಾಹನ ಪಾರ್ಕಿಂಗ್ ಮಾಡುವವರಿಗೂ ಬಿಸಿ ಮುಟ್ಟಿಸುವ ಕಾರ್ಯ ಮಾಡಲು ನಿರ್ಧಾರ ಮಾಡಿದ್ದಾರೆ.

ಹುಬ್ಬಳ್ಳಿ ಧಾರವಾಡ ಅವಳಿನಗರದ ವ್ಯಾಪ್ತಿಯಲ್ಲಿ 30 ಕಡೆಯಲ್ಲಿ ಗಂಟೆ ಆಧಾರಿತ ಪಾರ್ಕಿಂಗ್ ಸ್ಥಳಗಳನ್ನು ಗುರುತಿಸಿದ್ದು, ಪೊಲೀಸ್ ಇಲಾಖೆಯ ಸಹಭಾಗಿತ್ವದಲ್ಲಿ ಪಾಲಿಕೆಯು ಈಗ ಗಂಟೆಗಳ ಆಧಾರದ ಮೇಲೆ ಪಾರ್ಕಿಂಗ್ ಟೆಂಡರ್ ಕರೆದಿದೆ. ಹೌದು.. ದಿನಗಟ್ಟಲೇ ಒಂದೇ ಜಾಗೆಯಲ್ಲಿ ಪಾರ್ಕಿಂಗ್ ಮಾಡುವವರಿಂದ ಪಾರ್ಕಿಂಗ್ ಹಣವನ್ನು ವಸೂಲಿ ಮಾಡುವ ಮೂಲಕ ಪಾರ್ಕಿಂಗ್ ವ್ಯವಸ್ಥೆ ಸುಧಾರಿಸಲು ಮುಂದಾಗಿದೆ. ಈಗಾಗಲೇ ಬಹುತೇಕ ಕಡೆಯಲ್ಲಿ ಅನಧಿಕೃತ ಪಾರ್ಕಿಂಗ್ ತಲೆಯಿತ್ತಿದ್ದು, ಈ ನಿಟ್ಟಿನಲ್ಲಿ ಬಿಸಿ ಮುಟ್ಟಿಸಲು ಪಾಲಿಕೆ ನಿರ್ಧಾರ ಮಾಡಿದ್ದು, 30 ಸ್ಥಳಗಳಲ್ಲಿ ಫೇಯಡ್ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ಮುಂದಾಗಿದೆ.

ಇನ್ನೂ ಫೇಯಡ್ ಪಾರ್ಕಿಂಗ್ ಟೆಂಡರ್ ಹಂತದಲ್ಲಿದ್ದು, ಬಿಡ್ಡಿಂಗ್ ಮೂಲಕ ಹರಾಜು ನಡೆಸಲಾಗುತ್ತದೆ. ಹೆಚ್ಚಿನ ಬೆಲೆ ನೀಡಿದವರಿಗೆ ಟೆಂಡರ್ ನೀಡಲು ಮುಂದಾಗಿದೆ. ಇದರಿಂದ ಎಲ್ಲೆಂದರಲ್ಲಿ ಹಾಗೂ ಜನನಿಬಿಡ ಪ್ರದೇಶದಲ್ಲಿ ದಿನಗಟ್ಟಲೇ ಪಾರ್ಕಿಂಗ್ ಮಾಡುವವರಿಗೆ ಬಿಸಿ ಮುಟ್ಟಿಸಲು ಇಂತಹದೊಂದು ವ್ಯವಸ್ಥೆ ಜಾರಿಗೆ ತರಲಾಗಿದೆ.

Leave a Reply

Your email address will not be published. Required fields are marked *