ಕಾರವಾರ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಕ್ಯಾಸಲ್ ರಾಕ್ ಬಳಿ ರೇಲ್ವೆ ಮಾರ್ಗದಲ್ಲಿ ರೈಲೊಂದು ಹಳಿ ತಪ್ಪಿದ ಘಟನೆ ಶುಕ್ರವಾರ ಬೆಳಿಗ್ಗೆ ಸಂಭವಿಸಿದೆ. ದೂದ್ ಸಾಗರ ಹಾಗೂ ಸೋನಾಲಿಮ್ ನಡುವೆ ಈ ಘಟನೆ ನಡೆದಿದ್ದು ಕಲ್ಲಿದ್ದಲು ಹೊತ್ತ ರೈಲಿನ ಸುಮಾರು 11 ಬೋಗಿ ಕೆಳಕ್ಕೆ ಜಾರಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.
ರೈಲ್ವೆ ದುರಂತದಿಂದಾಗಿ ಸಂಜೆ ಹೊರಡುವ ವಾಸ್ಕೊ ನಿಜಾಮುದ್ದಿನ್ ಗೆ ತೆರಳುವ ವಾಹನದ ಮಾರ್ಗ ಬದಲಾಯಿಸುವ ಸಾಧ್ಯತೆ ಇದೆ. ಅದರಂತೆ ಹುಬ್ಬಳ್ಳಿ, ಬೆಳಗಾವಿಯಿಂದ ಗೋವಾಕ್ಕೆ ಸಂಚರಿಸುವ ರೈಲಿನಲ್ಲಿ ವ್ಯತ್ಯಯ ಆಗಬಹುದು. ಘಟನೆಯಿಂದಾಗಿ ಮಡಗಾಂವ ನಿಂದ ಬೆಳಗಾವಿ ಮತ್ತು ಹುಬ್ಬಳ್ಳಿ ಕಡೆ ತೆರಳುವ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ನೈರುತ್ಯ ವಲಯದ ಹುಬ್ಬಳ್ಳಿ ವಿಭಾಗದಲ್ಲಿ ಈ ಘಟನೆ ನಡೆದಿದ