ಏಳು ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿದ್ದ
ಬಸವೇಶ್ವರ ಏತ ನೀರಾವರಿ ವಿಳಂಬಕ್ಕೆ ರಾಜ್ಯ ಸರ್ಕಾರದ ಇಚ್ಚಾಶಕ್ತಿ ಕೊರತೆಯಿಂದಾಗಿ ಕಾಮಗಾರಿ ನಿಂತಲ್ಲೆ ನಿಂತು ರೈತರು ಗುಳೆ ಹೋಗುವ ಪರಿಸ್ಥಿತಿ ಎದುರಾಗಿದೆ. ಜುಲೈ 15 ಕ್ಕೆ ನೀರು ಬಿಡುವ ಸ್ಥಳೀಯ ಶಾಸಕರ ಹೇಳಿಕೆ ಹುಸಿಯಾಗಿದ್ದಕ್ಕೆ ರೈತರು ಕೆಂಡಾಮಂಡಲರಾಗಿದ್ದಾರೆ. ಈಗ ಬಹುದಿನಗಳ ಬೇಡಿಕೆಗೆ ಪಟ್ಟು ಹಿಡಿದ ರೈತರು ಉಪವಾಸ ಸತ್ಯಾಗ್ರಹಕ್ಕೆ ಸಜ್ಜಾಗಿದ್ದಾರೆ.

ನಿರಾವರಿ ಯೋಜನೆ ಕುರಿತು ಪ್ರತಿಕ್ರಿಯೆ ನೀಡಿದ ಶಾಸಕ ರಾಜು ಕಾಗೆ ಬಸವೇಶ್ವರ ಏತ ನೀರಾವರಿ ಕುರಿತು ನಾನು ಸಿಎಂ ಜೊತೆ ಸಮಗ್ರ ಚರ್ಚೆ ಮಾಡಿದ್ದು, ಪೂರ್ಣಪ್ರಮಾಣದ ಕಾಮಗಾರಿಯಲ್ಲಿ ಸರ್ಕಾರದ ಲೋಪದೋಷಗಳಿಲ್ಲ.

ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಕಾಮಗಾರಿ ವಿಳಂಬವಾಗಿದ್ದು, ರೈತರ ಒಳಿತಿಗಾಗಿ ರೈತರ ಜೊತೆಗೆ ಸರ್ಕಾರದ ವಿರುದ್ಧವೂ ನಾನು ಹೋರಾಟ ಮಾಡಲು ಸಿದ್ಧನಾಗಿದ್ದೇನೆ. ಈಗಾಗಲೆ ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೂ ನಾನು ಸಿಎಂ ಡಿಸಿಎಂ ಅವರ ಗಮನಕ್ಕೂ ತಂದಿದ್ದೇನೆ ಒಂದೆಡೆ ಪ್ರವಾಹ ಮತ್ತೊಂದೆಡೆ ಬರ ಪರಿಸ್ಥಿತಿ ಇದೆ . ಈ ಕುರಿತು ಸರ್ಕಾರ ಸೂಕ್ತ ಪರಿಹಾರ ಹಾಗೂ ಬಸವೇಶ್ವರ ಏತ ನೀರಾವರಿ ವಿಳಂಬವಾಗದಂತೆ ಮನವರಿಕೆ ಮಾಡಿದ್ದೇನೆ.

ಒಂದು ವೇಳೆ ಅಗಸ್ಟ್ 30ರ ಒಳಗಾಗಿ ನೀರು ಬಿಡದಿದ್ದರೆ ರೈತರು ಹೋರಾಟಕ್ಕೆ ನಿಂತರೆ ನಾನು ರೈತರ ಜೊತೆಗೂಡಿ ಸ್ವ ಸರ್ಕಾರದ ವಿರುದ್ಧ ಹೋರಾಟಕ್ಕೆ ಸಿದ್ದನಾಗಿದ್ದೇನೆ ಎಂದು ಶಾಸಕ ರಾಜು ಕಾಗೆ ಸ್ಪಷ್ಟನೆ ನೀಡಿದರು.

Leave a Reply

Your email address will not be published. Required fields are marked *