ಮಣ್ಣಲ್ಲಿ ಮಣ್ಣಾಗುವ ವ್ಯಕ್ತಿಯ ದೇಹಕ್ಕೆ ಸಾವು ಖಚಿತ .
ಆದರೇ
*ಮನದಲ್ಲಿ ಉಳಿಯುವ ವ್ಯಕ್ತಿಯ ವ್ಯಕ್ತಿತ್ವವು ಸದಾ ಶಾಶ್ವತ *

* ಸಾವು ಖಚಿತ, ಆದರೆ ಸಾವು ಬಂದಾಗ ಯಾರಿಗೂ  ಸಾಯಬೇಕಂತ ಅನ್ನಿಸೋದಿಲ್ಲ .

* ಊಟ ಎಲ್ಲರಿಗೂ ಬೇಕು, ಆದರೆ ಯಾರೂ ವ್ಯವಸಾಯ ಮಾಡಬೇಕನ್ನುವುದಿಲ್ಲ.‌‌‌‌‌‌‌‌

* ನೀರು ಎಲ್ಲರಿಗೂ ಬೇಕು, ಆದರೆ ಅರಣ್ಯವನ್ನು ರಕ್ಷಿಸಬೇಕು ಅಂತ ಯಾರೂ ಪ್ರಯತ್ನಿಸುವುದಿಲ್ಲ .

* ಪಾಲು ಎಲ್ಲರಿಗೂ ಬೇಕು, ಆದರೆ ಅದನ್ನು ಪಾಲಿಸಬೇಕೆನ್ನುವ ಛಲ ಯಾರಿಗೂ ಇಲ್ಲ.

* ನೆರಳು ಎಲ್ಲರಿಗೂ ಬೇಕು, ಆದರೆ ಮರಗಳನ್ನು ರಕ್ಷಿಸಬೇಕೆನ್ನುವ ಹಂಬಲ ಯಾರಿಗೂ ಇಲ್ಲ.

* ಹೆಂಡತಿ ಎಲ್ಲರಿಗೂ ಬೇಕು, ಆದರೆ ಹೆಣ್ಣು ಮಕ್ಕಳು ಕೆಲವರಿಗೆ ಬೇಡ.

* ಹುಟ್ಟಿದಾಗ ನೀ ಅಳುತ್ತಿದ್ದೆ, ಆದರೆ  ಮಡಿದಾಗ ನಿನ್ನವರು ಅಳುತ್ತಿದ್ದರು.

*  ಹುಟ್ಟಿದಾಗ ನಿನಗೆ ವಸ್ತ್ರ ತೊಡಿಸುವರು, ಆದರೆ  ಮಡಿದಾಗ ನಿನ್ನ ವಸ್ತ್ರವ ಬಿಚ್ಚುವರು.

*  ಹುಟ್ಟಿದಾಗ  ಹುಡುಕುವರು ನಿನಗೆ ನೂರೆಂಟು ನಾಮ, ಆದರೆ ಮಡಿದ ಮೇಲೆ ಶವ ಎಂದೇ ನಿನ್ನ ನಾಮ.

*  ನೀನೇನನ್ನೂ ಗಳಿಸದೇ ಬಂದೆ, ಆದರೆ ಮಡಿದಾಗ ನೀನು ಗಳಿಸಿದ್ದನ್ನು ಕಳೆದುಕೊಂಡೆ.

ಮಡಿದಾಗ ಮಣ್ಣಲ್ಲಿ ಮಣ್ಣಾಗಿ ಹೋಗುವ ನೀನು, ನಿನ್ನದು ಎನ್ನಲು ನಿನಗೇನಿದೆ ??

ನಿನಗೆ ಜನ್ಮ ಕೊಟ್ಟವರು ಮತ್ತೊಬ್ಬರು, ನಿನಗೆ ಹೆಸರು ಕೊಟ್ಟವರು ಮತ್ತೊಬ್ಬರು, ನಿನಗೆ ಜ್ಙಾನ ಕೊಟ್ಟವರು ಮತ್ತೊಬ್ಬರು, ಕಡೆಗೆ ನಿನ್ನ ಅಂತ್ಯ ಸಂಸ್ಕಾರ ನಿರ್ವಹಿಸುವುದು ಕೂಡಾ ಮತ್ತೊಬ್ಬರೇ…
   ಹೀಗಿರುವಾಗ, 
ನಾನು ಎಂದು ಅಹಂಕರಿಸಲು ನೀನು ಯಾರು ??
ಏನಿದೇ ನಿನ್ನಲ್ಲಿ ???

ದೇವರು ನಮಗೆ ಜೀವನವನ್ನಲ್ಲ , ಜೀವವನ್ನಷ್ಟೆ ಕೊಟ್ಟ .
            ಆದರೆ
ಹೇಗೆ ಜೀವಿಸಬೇಕು ಎಂಬುದನ್ನು ಅವ ನಮಗೇ ಬಿಟ್ಟುಕೊಟ್ಟ!

Leave a Reply

Your email address will not be published. Required fields are marked *