ಸತತ ಮಳೆಗೆ ಧಾರವಾಡ ಗ್ರಾಮೀಣ ಜನ ಜೀವನ ಅಸ್ತವ್ಯಸ್ತ ಕೆಸರು ಗದ್ದೆಗಳಾದ ಗ್ರಾಮಗಳ ಪ್ರಮುಖ ರಸ್ತೆಗಳು ಜನ ಸಂಕಷ್ಟದಲ್ಲಿದ್ದರೂ ಸಮಸ್ಯೆ ಆಲಿಸಲು ಬಾರದ ಜನಪ್ರತಿನಿಗಳು
ಹುಬ್ಬಳ್ಳಿ: ಸತತ ಮಳೆಗೆ ಧಾರವಾಡ ಗ್ರಾಮೀಣ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಗ್ರಾಮಗಳ ಪ್ರಮುಖ ರಸ್ತೆಗಳು ಕೆಸರು ಗೆದ್ದಗಳಾಗಿವೆ. ಜನ ಸಂಕಷ್ಟದಲ್ಲಿದ್ದರೂ,ಸಮಸ್ಯೆ ಆಲಿಸಲು ಬಾರದ ಜನಪ್ರತಿನಿಗಳು ಸ್ಥಳಕ್ಕೆ ಬಂದಿಲ್ಲ ಅಂತ, ನ್ಯೂಸ್ ಒನ್ ಕರ್ನಾಟಕ ಎದುರು ಕುಂದಗೋಳ ತಾಲೂಕಿನ ಬೆಟದೂರು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.
ಕೆಸರು ಗದ್ದೆಯಂತಾ ರಸ್ತೆಯಲ್ಲಿ ನಡೆದಾಡಲು ಸಹ ಆಗ ಪರಿಸ್ಥಿತಿ..ಶಾಲೆ ಬಿಟ್ಟು ಮಕ್ಕಳು ಮನೆಯಲ್ಲಿ ಕುಳಿತಿದ್ದಾರೆ..ಮತ್ತೊಂದು ಕಡೆ ಕೊಳಚೆ ನೀರಿನಿಂದ ಡೆಂಗ್ಯೂ, ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಿದೆ ಅಂತ ಗ್ರಾಮಸ್ಥರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ..