ಚಿಕ್ಕಬಳ್ಳಾಪುರ ಹೊರವಲಯದ ಕೆವಿ ಕ್ಯಾಂಪಸ್ ನಲ್ಲಿ ನಡೆದ ರಕ್ತಧಾನ ಶಿಬಿರದ ಈ ಬಾರೀ ರಾಜ್ಯಮಟ್ಟದಲ್ಲಿ ದಾಖಲೆ ಬರೆದಿತ್ತು. ಸದ್ಯ ಅದೇ ಟ್ರಸ್ಟ್ ನ ಅಧ್ಯಕ್ಷ ಕೆವಿ ನವೀನ್ ಕಿರಣ್ ಅವರ ಮನೆಗೆ ಇಂದು ಕಿಚ್ಚ ಸುದೀಪ್ ಭೇಟಿ ಕೊಟ್ಟು ಅಚ್ಚರಿ ಮೂಡಿಸಿದ್ದಾರೆ.

ಕಳೆದ ತಿಂಗಳಲ್ಲಿ ಕೆವಿ ಹಾಗೂ ಪಂಚಗಿರಿ ಶಿಕ್ಷಣ ಸಂಸ್ಥೆಗಳ ಟ್ರಸ್ಟ್ ಡೇ ಅಂಗವಾಗಿ ದಾಖಲೆ ಸೃಷ್ಟಿಸಿದ ರಕ್ತದಾನ ಶಿಬಿರದ ರೂವಾರಿ ಮತ್ತು ಕೆ.ವಿ. ಹಾಗೂ ಪಂಚಗಿರಿ ವಿದ್ಯಾ ಸಂಸ್ಥೆಗಳ ಅಧ್ಯಕ್ಷರಾದ ಕೆ.ವಿ. ನವೀನ್ ಕಿರಣ್ ರಾಜ್ಯದ ಗಮನವನ್ನು ಸೆಳೆದಿದ್ದರು. ಸದ್ಯ ಇದೇ ವಿಚಾರ ಕಿಚ್ಚ ಸುದೀಪ್ ಅವರ ಗಮನಕ್ಕೆ ಬಂದಿದೆ ಎಂದು ತಿಳಿದು ಬಂದಿದೆ.

ಇದರ ಸಲುವಾಗಿಯೇ ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಕೆ.ವಿ. ಮತ್ತು ಪಂಚಗಿರಿ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ನವೀನ್ ಕಿರಣ್ ಅವರ ಮನೆಗೆ ಇಂದು ಸುದೀಪ್ ಭೇಟಿ ನೀಡಿದ್ದು, ಹೈದರಾಬಾದ್‌ನಿಂದ ಕಾರಿನಲ್ಲಿ ಬಂದ ಅವರು, ಮಾರ್ಗ ಮಧ್ಯೆ ನವೀನ್ ಕಿರಣ್ ಅವರ ಮನೆಯಲ್ಲಿ ಭೋಜನವನ್ನು ಸವಿದು ನಂತರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿದರು.

ನವೀನ್ ಕಿರಣ್ ಅವರು ತಮ್ಮ ಟ್ರಸ್ಟ್ ಡೇ ಅಂಗವಾಗಿ ರಾಜ್ಯದಾದ್ಯಂತ ಗಮನ ಸೆಳೆದಿದ್ದ ಧಾಖಲೆ ರಕ್ತದಾನ ಶಿಬಿರವನ್ನು ಆಯೋಜಿಸಿದ್ದರು, ಇದು ಸುದೀಪ್ ಅವರಿಗೆ ತಿಳಿದಿದ್ದು ಆದರಿಂದ ಅವರ ಈ ಸೇವೆಯನ್ನು ಗುರುತ್ತಿಸಿ ಮೆಚ್ಚುಗೆಯನ್ನು ವ್ಯಕ್ತಪಡಿಸಿ ನವೀನ್ ಕಿರಣ್ ಅವರನ್ನು ಸನ್ಮಾನಿಸಿದರು.

Leave a Reply

Your email address will not be published. Required fields are marked *