ಸಿಲಿಕಾನ್ ಸಿಟಿಯ ಮಳೆ ಅವಾಂತರಗಳ ಬಗ್ಗೆ ಎಷ್ಟೇ ವಿರೋಧ ವ್ಯಕ್ತವಾದ್ರೂ ಎಚ್ಚೆತ್ತುಕೊಳ್ಳದೇ ನಿದ್ದೆಗೆ ಜಾರಿದ್ದ ಪಾಲಿಕೆ, ಡಿಸಿಎಂ ಸಿಟಿರೌಂಡ್ಸ್ ಬಳಿಕ ಇದೀಗ ನಿಧಾನಕ್ಕೆ ಕಣ್ಣುತೆರೆಯುತ್ತಿದೆ. ಬೆಂಗಳೂರಲ್ಲಿ ಏನೇ ಅವಾಂತರ ಸೃಷ್ಟಿಯಾದ್ರೂ ಪಾಲಿಕೆಗಿಂತ ಮೊದಲೇ ಎಂಟ್ರಿಕೊಡೋ ಟ್ರಾಫಿಕ್ ಪೊಲೀಸರು ಇದೀಗ ಬಿಬಿಎಂಪಿಗೆ ಬೆಂಗಳೂರಿನ 180 ಡೆಡ್ಲಿಸ್ಪಾಟ್ ಗಳ ರಿಪೋರ್ಟ್ ಕೊಟ್ಟಿದೆ. ಮಳೆ ಬಂದಾಗ ಅವಾಂತರ ಸೃಷ್ಟಿಸೋ ಜಾಗಗಳ ಬಗ್ಗೆ ಫೋಟೋ ಸಮೇತ ದಾಖಲೆ ಕೊಟ್ಟರೂ ಸೈಲೆಂಟ್ ಆಗಿದ್ದ ಪಾಲಿಕೆ, ಇದೀಗ ಪೊಲೀಸರ ರಿಪೋರ್ಟ್ ಪರಿಶೀಲಿಸಿ ಕೆಲಸ ಶುರುಮಾಡೋಕೆ ಸಜ್ಜಾಗಿದೆ
ರಾಜಧಾನಿ ಬೆಂಗಳೂರಲ್ಲಿ ಮಳೆ ಬಂದು ಅವಾಂತರ ಸೃಷ್ಟಿಸಿತ್ತು. ಬೆಂಗಳೂರಿನ ರಸ್ತೆಗಳು, ಅಂಡರ್ ಪಾಸ್ ಗಳು ಜಲಾವೃತವಾಗಿತ್ತು, ಮೊನ್ನೆಯಷ್ಟೇ ಸುರಿದ ಮಳೆ ಅವಾಂತರ ಸೃಷ್ಟಿಸಿದ್ದರಿಂದ ಡಿಸಿಎಂ ಡಿ.ಕೆ.ಶಿವಕುಮಾರ್ ಸಿಟಿ ರೌಂಡ್ಸ್ ಕೂಡ ಹಾಕಿದ್ರು. ಇದೀಗ ಇದೇ ವಿಚಾರದ ಬಗ್ಗೆ ಪಾಲಿಕೆಗೆ ಪೊಲೀಸ್ ಇಲಾಖೆ ವರದಿ ನೀಡಿದೆ. ಸದ್ಯ ಮಳೆ ಬಂದು ಅವಾಂತರ ಸೃಷ್ಟಿಯಾದ್ರೂ, ಮರ ಬಿದ್ದು ರಸ್ತೆ ಜಾಮ್ ಆದ್ರೂ ಬಿಬಿಎಂಪಿಗಿಂತ ಮೊದಲೇ ಸ್ಥಳಕ್ಕೆ ಬರೋ ಪೊಲೀಸರು ಇದೀಗ ಬೆಂಗಳೂರಲ್ಲಿ ಪದೇ ಪದೇ ಸಮಸ್ಯೆ ತಂದಿಡೋ ಸ್ಥಳಗಳ ಬಗ್ಗೆ ಪಾಲಿಕೆಗೆ ರಿಪೋರ್ಟ್ ಕೊಟ್ಟಿದ್ದಾರೆ
ಇನ್ನು ಮಳೆ ಬಂದಾಗ ಅಂಡರ್ ಪಾಸ್ ಗಳು, ರಸ್ತೆಗಳು ಜಲಾವೃತವಾಗಿ ಅವಾಂತರ ಸೃಷ್ಟಿಯಾಗೋ ಜೊತೆಗೆ ಟ್ರಾಫಿಕ್ ಜಾಮ್ ಕೂಡ ಉಂಟಾಗ್ತಿದೆ. ಈ ಹಿನ್ನೆಲೆ ಪ್ರತಿಬಾರೀ ಮಳೆ ಬಂದಾಗ ಫೀಲ್ಡ್ ನಲ್ಲಿ ಪರದಾಡೋ ಪೊಲೀಸರು 180 ಸ್ಥಳಗಳಲ್ಲಿ ಡೆಡ್ಲಿ ಸ್ಪಾಟ್ ಗಳನ್ನ ಗುರ್ತಿಸಿದ್ದಾರೆ. ಮಳೆ ಬಂದ ವೇಳೆ ಆಗೋ ಅವಾಂತರಗಳನ್ನ ಫೋಟೋ ಸಮೇತ ಬಿಬಿಎಂಪಿಗೆ ನೀಡಿರೋ ಪೊಲೀಸರು ಸಮಸ್ಯೆ ಬಗೆಹರಿಸಲು ಸಲಹೆ ಕೊಟ್ಟಿದ್ದಾರೆ
ಸದ್ಯ ಮಳೆ ಅವಾಂತರಗಳ ಬಗ್ಗೆ ರಿಪೋರ್ಟ್ ಕೊಟ್ಟರೋ ಮೌನವಾಗಿದ್ದ ಪಾಲಿಕೆ, ಇದೀಗ ಪೊಲೀಸರು ಕೊಟ್ಟಿದ್ದ ಜಾಗಗಳ ಪರಿಶೀಲನೆಗೆ ಮುಂದಾಗಿದ್ದಾರೆ. ಮಳೆ ಬಂದ್ರೆ ಸಮಸ್ಯೆ ತಂದಿಡೋ ಜಾಗಗಳ ಬಗ್ಗೆ ಪರಿಶೀಲನೆ ನಡೆಸಲು ಹೊರಟಿರೋ ಪಾಲಿಕೆ ಕೆಲವೆಡೆ ಕೆಲಸ ಆರಂಭಿಸಿದ್ದು, ಇದೀಗ ಪೊಲೀಸರು ನೀಡಿರೋ ವರದಿಗಳನ್ನ ಪರಿಶೀಲಿಸಲು ಸಜ್ಜಾಗಿದೆ
ಒಟ್ಟಿನಲ್ಲಿ ಊರೆಲ್ಲ ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕೊಂಡ್ರು ಅನ್ನೋ ಹಾಗೇ ಮಳೆ ಬಂದು ಅವಾಂತರ ಸೃಷ್ಟಿಸಿ ಹೋದ ಬಳಿಕ ಇದೀಗ ಅವಾಂತರ ಸೃಷ್ಟಿಸೋ ಸ್ಥಳಗಳ ಮೇಲೆ ಪಾಲಿಕೆ ನಿಗಾ ಇಡಲು ಹೊರಟಿದೆ. ಸದ್ಯ ಬೆಂಗಳೂರಿನ ಜನರಿಗೆ ಇನ್ನಾದ್ರೂ ಮಳೆ ಸಂಕಷ್ಟದಿಂದ ಮುಕ್ತಿ ಸಿಗುತ್ತಾ ಅನ್ನೋದನ್ನ ಕಾದುನೋಡಬೇಕಿದೆ.