ಸಾಮಾನ್ಯವಾಗಿ ಮನೆಯಲ್ಲಿ ಹೆಂಗಳೆಯರು ದೇವರಿಗೆ ಪೂಜೆ ಮಾಡುವಾಗ ಆರತಿ ಮಾಡುವುದು ಬಹಳ ಶ್ರೇಷ್ಟ ಆದರೇ ದೇವರಿಗೆ ಆರತಿಯನ್ನು ನೈವೇರಿಸುವಾಗ ಮನಸ್ಸಲ್ಲಿ ಹಲವಾರು ಕೋರಿಕೆಗಳನ್ನು ದೇವರಿಗೆ ಸಲ್ಲಿಸುತ್ತಾ ಆರತಿ ಮಾಡುತ್ತಾರೆ ಆದ್ರೆ ಈ ಆರತಿ ವಿಶೇಷತೆ ಏನು ಗೊತ್ತಾ? ಆರತಿಯಲ್ಲಿಯೂ ಅನೇಕ ವಿಧಾನಗಳಿವೆ ಒಂದೊಂದು ಆರತಿಗೂ ಒಂದೊಂದು ವೈಶಿಷ್ಟ್ಯವಿದೆ. ಹಾಗಾದ್ರೆ ಬನ್ನಿ ಆರತಿ ಮಾಡುವುದರಲ್ಲಿ ಎಷ್ಟು ವಿಧಗಳಿಗೆ ಹಾಗೇ ಅವುಗಳ ವಿಶೇಷತೆ ಮತ್ತು ಫಲಪ್ರದಗಳ ಬಗ್ಗೆ ತಿಳಿಯೋಣ ;-
ಆರತಿಯ ವಿಧಗಳು ಹಾಗೂ ವೈಶಿಷ್ಟ್ಯಗಳು;-
01🌹,ಏಕಾರತಿ { ಒಂದು } ಮಾಡುವುದರಿಂದ ಪೂಜೆಯ ಪೂರ್ಣ ಫಲ ದೊರೆಯುತ್ತದೆ,
02🌹,ದ್ವಿ ಆರತಿ{ಎರಡು} ಮಾಡುವುದರಿಂದ ದಾಂಪತ್ಯ ಸೌಖ್ಯ ಫಲ ದೊರೆಯುತ್ತದೆ,
03🌹,ತ್ರಯ ಆರತಿ {ಮೂರು} ಮಾಡುವುದರಿಂದ ಕುಟುಂಬ ಅಭಿವೃದ್ಧಿಯುಂಟಾಗುತ್ತದೆ,
04🌹,ಪಂಚ ಆರತಿ{ ಐದು} ಮಾಡುವುದರಿಂದ ಪರಿಸರದಲ್ಲಿ ಸಸ್ಯವೃದ್ದಿ ಆಗುತ್ತದೆ,
05🌹,ನವ ಆರತಿ {ಒಂಬತ್ತು}ಮಾಡುವುದರಿಂದ ಇಡೀ ವರ್ಷ ವೃದ್ದಿ ಫಲ ದೊರೆಯುತ್ತದೆ,
06🌹,ಏಕಾದಶಆರತಿ{ಹನ್ನೊಂದು} ಮಾಡುವುದರಿಂದ ಮಹಾಲಕ್ಷ್ಮಿಸುಪ್ರೀತಳಾಗುತ್ತಾಳೆ,
07🌹,ದ್ವಾದಶಆರತಿ{ಹನ್ನೆರಡು} ಮಾಡುವುದರಿಂದ ಸುಖ ನೆಮ್ಮದಿಯುಂಟಾಗುತ್ತದೆ,
08🌹,ಷೋಡಶಆರತಿ{ಹದಿನಾರು} ಮಾಡುವುದರಿಂದ ವಿಶೇಷ ಧನಲಾಭವುಂಟಾಗುತ್ತದೆ,
09🌹,ಏಕವಿಂಶತಿ{ಇಪ್ಪತ್ತೊಂದು}ಮಾಡುವುದರಿಂದ ರಾಜ್ಯಲಾಭ ದೊರೆಯುತ್ತದೆ,
10🌹,ಚತುರ್ವಿಂಶತಿ ಆರತಿ{ಇಪ್ಪತ್ನಾಲ್ಕು} ಉತ್ತಮ ಮಳೆ ಬೆಳೆ ಉಂಟಾಗುತ್ತದೆ.
11🌹,ನಕ್ಷತ್ರಆರತಿ{ಇಪ್ಪತ್ತೇಳು}ಸಕಲ ದೇವತೆಗಳು ಅನುಗ್ರಹಿಸುತ್ತಾರೆ,
12🌹,ನಾಗ ಆರತಿ ಮಾಡುವುದರಿಂದ ಉತ್ತಮ ಸಂತಾನ ವೃದ್ಧಿಯಾಗುತ್ತದೆ,
13🌹,ಕೂರ್ಮ ಆರತಿ ಮಾಡುವುದರಿಂದ ಧೈರ್ಯ ಸ್ತೈರ್ಯ ಧೃಡತೆವುಂಟಾಗಿ ಭಗವಂತನ ಪೂರ್ಣಾನುಗ್ರಹವಾಗುತ್ತದೆ.
14🌹,ಅಷ್ಟೋತ್ತರ ಶತದೀಪ{ ನೂರೆಂಟು } ಲಕ್ಷ್ಮೀನಾರಾಯಣರ ಸಂಪೂರ್ಣ ಕೃಪಾಕಟಾಕ್ಷವುಂಟಾಗುತ್ತದೆ,🙏