ನೆಲಮಂಗಲ: ಹೆದ್ದಾರಿ ಪ್ರಯಾಣಿಕರಿಗೆ ಭಯವನ್ನುಂಟು ಮಾಡುತ್ತಿದ್ದ, ಪುಂಡರನ್ನು ಅಡ್ಡಗಟ್ಟಿದ ಸಾರ್ವಜನಿಕರು ಪುಂಡರ ದ್ವಿಚಕ್ರವಾಹನವನ್ನು ಜಖಂ ಗೊಳಿಸಿ ಆಕ್ರೋಶ ವ್ಯಕ್ತಪಡಿಸಿ ಬುದ್ದಿಕಲಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಈಗ ಸಕ್ಕತ್ ವೈರಲ್ ಆಗಿದೆ.
ಎರಡು ದ್ವಿಚಕ್ರವಾಹನಗಳಲ್ಲಿ ಚಲಿಸುತ್ತಿದ್ದ ನಾಲ್ಕುಮಂದಿ ಪುಂಡರ ಗುಂಪು ರಾಷ್ಟ್ರೀಯ ಹೆದ್ದಾರಿಯಲಿ ಕೆಎ 08. ಆರ್ 2480 ಹಾಗೂ ಕೆಎ04, ಜೆಡಬ್ಲ್ಯೂ 9575 ನಂಬರಿನ ಎರಡು ಹೋಂಡ ಡಿಯೋ ದ್ವಿಚಕ್ರವಾಹನಗಳಲ್ಲಿ ವೀಲಿಂಗ್ ಮಾಡುವ ಮೂಲಕ ಪ್ರಯಾಣಿಕರಲ್ಲಿ ಭಯದ ವಾತಾವರಣವನ್ನುಂಟು ಮಾಡುತಿತ್ತು. ಮಾರ್ಗ ಮಧ್ಯೆದಲ್ಲಿರುವ ಅಡಕಮಾರನಹಳ್ಳಿ ಸಮೀಪದ ಹೆದ್ದಾರಿ ಮೇಲ್ಲೇತುವೆ ಬಳಿ ಇದನ್ನು ಗಮನಿಸಿದ ಕೆಲ ಹೆದ್ದಾರಿ ಪ್ರಯಾ ಣಿಕರು ತಾಳ್ಮೆಯ ಕಟ್ಟೆ ಹೊಡೆದ ಬಳಿಕ ಫೀಲಿಂಗ್ ಮಾಡುತಿದ್ದಪುಂಡ ರನ್ನು ಅಡ್ಡಗಟ್ಟಿ ಪ್ರಶ್ನಿಸಿದ್ದಾರೆ. ಈ ವೇಳೆಯಲ್ಲಿ ಭಯಗೊಂಡ ನಾಲ್ಕು ಮಂದಿ ಪುಂಡರು ತಮ್ಮ ಕಾಲಿಗೆ ಬುದ್ದಿಹೇಳಿ ಪರಾರಿಯಾಗಿದ್ದಾರೆ.
ಇವರ ವರ್ತನೆಯನ್ನು ಕಂಡ ಹೆದ್ದಾರಿ ಪ್ರಯಾಣಿಕರು ಪುಂಡರಿಗೆ ಬುದ್ದಿಕಲಿಸುವ ಸಲುವಾಗಿ ಪುಂಡರು ಬಿಟ್ಟುಹೋಗಿದ್ದ ದ್ವಿಚಕ್ರ ವಾಹನ ಗಳನ್ನು ಹೆದಾರಿ ಮೆಲೇತುವೆಯ ಮೇಲಿಂದ ಕೆಳಗೆ ಎಸೆಯುವ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿ ವೀಲಿಂಗ್ ಪುಂಡರಿಗೆ ರಸ್ತೆ. ಗಳಲ್ಲಿವೀಲ್ಡಿಂಗ್ ಸಲ್ಲದು. ನಾಗರೀಕ ಸಮಾಜ ಅಸಭ್ಯ ವರ್ತನೆಗಳನ್ನು ಖಂಡಿಸುತ್ತದೆ ಎಂಬ ಖಡಕ್ ಎಚ್ಚರಿಕೆಯನ್ನು ರವಾನಿಸಿದ್ದಾರೆ.
ಹೆದ್ದಾರಿ ಸೇರಿದಂತೆ ನಗರ ಕೆಲ ರಸ್ತೆಗಳಲ್ಲಿ ಹಾಗೂ ಮಹಿಳೆಯರು ಮತ್ತು ಹೆಣ್ಣು ಮಕ್ಕಳು ಹೆಚ್ಚು ಓಡಾಡುವ ಕಾಲೇಜು ರಸ್ತೆಗಳಲ್ಲಿ ಪುಂಡರ ಹಾವಳಿ ಹೇಳ ತೀರದಾಗಿದೆ. ರಸ್ತೆಗಳಲ್ಲಿ ಮನಸೋಯಿಚ್ಚೆ ದ್ವಿಚಕ್ರವಾಹನಗಳನ್ನು ಓಡಾಡಿಸುವ ಪುಂಡರಿಂದಾಗಿ ಮಹಿಳೆಯರು ಮತ್ತು ಮಕ್ಕಳು ನೆಮ್ಮದಿಯಿಂದ ಓಡಾಡುವುದು ಕಷ್ಟಕರವಾಗಿದೆ ಪೊಲೀಸರು ಇಂತಹ ಪುಂಡರಿಗೆ ಕಡಿವಾಣ ಹಾಕಬೇಕಿದೆ ಎಂದು ನಗರದ ನಾಗರೀಕರು ಮನವಿ ಮಾಡಿದ್ದಾರೆ.
ನಕಲಿ ನಂಬರ್ ಪ್ಲೇಟ್ ಎರಡು ಪ್ರಕರಣ ದಾಖಲು
ರಾಷ್ಟ್ರೀಯ ಹೆದ್ದಾರಿಯಲ್ಲಿ ವಿಲ್ಡಿಂಗ್ ಮಾಡುತ್ತಿದ್ದ ಘಟನೆಯ ಮಾಹಿತಿ ಪಡೆದುಕೊಂಡ ನೆಲಮಂಗಲ ಪುಂಡರ ಹಾವಳಿಗಳ ಕುರಿತಾಗಿ ಮಾಹಿತಿ ಸಂಚಾರಿ ಪೊಲೀಸ್ ಠಾಣೆ ಅಧಿಕಾರಿಗಳು ಮತ್ತು ಸಿಬ್ಬಂಗಳು ಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸಿ ಸಾರ್ವಜನಿಕರು ಹೆದಾರಿ ಬ್ರಿಡ್ ಮೇಲಿನಿಂದ ಕೆಳಗೆ ಎಸೆದಿದ್ದ ದ್ವಿಚಕ್ರವಾಹನಗಳನ್ನು ವಶಕ್ಕೆ ಪಡೆದುಕೊಂಡು ತನಿಖೆ ಆರಂಭಿಸಿದ್ದಾರೆ.
ದ್ವಿಚಕ್ರವಾಹನಗಳಲ್ಲಿ ಆಳವಡಿಸಿದ ನೊಂದಣಿ ಸಂಖ್ಯೆಗಳು ನಕಲಿ ಎಂಬುದು ಪೊಲೀಸರಿಂದ ತಿಳಿದುಬಂದಿದು ಪ್ರಕಣ ದಾಖಲಿಸಿಕೊಂಡಿದ್ದಾರೆ, ಹಾಗೂ ಸಾರ್ವಜನಿಕರು ಬ್ರಿಡ್ಜ್ ಮೇಲಿಂದ ದ್ವಿಚಕ್ರ ವಾಹನಗಳನ್ನು ಕೆಳಗೆ ಎಸೆದು ಜಖಂಗೊಳಿಸಿರುವ ಕಾರಣಕ್ಕೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿಯೂ ಸಹ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೆದ್ದಾರಿಯ ಎರೆಡೂ ಬದಿಯ ಟೋಲ್ಗಳ ಹತ್ತಿರ ಪೊಲೀಸ್ ಸಿಬ್ಬಂಗಳನ್ನು ನೇಮಿಸಿ ಪುಂಡರ ಹಿಡಿಯಲು ಮುಂದಾಗಿದ್ದವೇಳೆ ಎಚ್ಚೆತ್ತುಕೊಂಡ ಪುಂಡರು ಹೆದಾರಿಯಲ್ಲಿಯೇ ದ್ವಿಚಕ್ರವಾಹನಗಳನ್ನು ಬಿಟ್ಟುಪರಾರಿಯಾಗಿದ್ದಾರೆ. ಆಕ್ರೋಶಗೊಂಡ ಸಾರ್ವಜನಿಕರು ಬೈಕ್ಗಳನ್ನು ಸೇತುವೆ ಮೇಲಿಂದ ಕೆಳಗೆ ಎಸೆದಿದ್ದಾರೆ. ನಂತರ ಪ್ರಕರಣದ ತನಿಖೆಯನ್ನು ನಡೆಸಲಾಗಿದ್ದು ದ್ವಿಚಕ್ರವಾಹನಗಳಿಗೆ ಅಳವಡಿಸಿದ್ದ ನಂಬರ್ ಪ್ಲೇಟ ಗಳು ನಕಲಿಯಾಗಿದ್ದು ಬೇರೆ ವಾಹನಗಳ ನಂಬರ್ ಗಳನ್ನು ಅಳವಡಿಸಿ ಕೊಂಡು ಈ ರೀತಿಯ ಕೃತ್ಯಕ್ಕೆ ಪುಂಡರು ಮುಂದಾಗಿದ್ದರು ಎಂದು ಡಿವೈಎಸ್ಪಿ ಜಗದೀಶ್ ತಿಳಿಸಿದ್ದಾರೆ.