ಕೊಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ, ವೈದ್ಯೆಯ ಮೇಲೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನ ಖಂಡಿಸಿ ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಜಿಗಣಿಯಾ OTC ಸರ್ಕಲ್ ಇಂದ ಕಲ್ಲುಬಾಳು ಗ್ರಾಮದ ವರೆಗೆ ಸುಶ್ರುತ ಆಯುರ್ವೇದೀಯಾ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ವಿಧ್ಯಾರ್ಥಿಗಳು ಹಾಗೂ ವೈದ್ಯರು ಕಾಲ್ನಡಿಗೆ ಜಾಥಾ ಮೂಲಕ ನ್ಯಾಯಕ್ಕಾಗಿ ಆಗ್ರಹಿಸಿದರು.
ವಿಧ್ಯಾರ್ಥಿಗಳು ಹಾಗೂ ವೈದ್ಯರ ಮನ ಮಿಡಿದಿದ್ದು.., ಕೂಡಲೇ ಆರೋಪಿಯನ್ನ ಬಂಧಿಸಬೇಕು ಹಾಗೂ ವೈದ್ಯರಿಗೆ ಸೂಕ್ತ ಭದ್ರತೆ ನೀಡಬೇಕೆಂದು ಆಗ್ರಹಿಸಿದರು. ಇನ್ನೂ ಪ್ರತಿಭಟನೆಯಲ್ಲಿ ಡಾಕ್ಟರ್ ಆಯುರ್ವೇದೀಯಾ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ವಿಧ್ಯಾರ್ಥಿಗಳು ಹಾಗೂ ವೈದ್ಯರ ಭಾಗವಹಿಸಿದ್ದರು…