*
*📓 ಇಂದಿನ ಇತಿಹಾಸ 📓*

💐 *ಆಗಸ್ಟ್ 19 – ವಿಶ್ವ ಛಾಯಾಗ್ರಹಣ ದಿನ 💐*

ಜಾಗತಿಕ ಮಟ್ಟದಲ್ಲಿ ಛಾಯಾಗ್ರಹಣಕ್ಕೆ ಕೊಟ್ಟಿರುವ ಪ್ರಾಮುಖ್ಯತೆಯ ಪ್ರತೀಕವಾಗಿ ಪ್ರತಿ ವರ್ಷ ಆಗಸ್ಟ್ 19 ರಂದು ವಿಶ್ವ ಛಾಯಾಗ್ರಾಹಣ ದಿನ ಆಚರಿಸಲಾಗುತ್ತಿದೆ. ಜಗತ್ತಿನ ವಿಸ್ಮಯ, ನೈಜ ಚಿತ್ರಣಗಳನ್ನು ಸೆರೆಹಿಡಿಯುವ ಛಾಯಾಗ್ರಹಣ ಅತ್ಯಂತ ಸವಾಲಿನ ಹಾಗೂ ಸೃಜನಾತ್ಮಕ ಕಲೆ/ವೃತ್ತಿ.

👉 1939ರ ಆಗಸ್ಟ್ 19 ರಂದು ಫ್ರಾನ್ಸ್ ದೇಶದಲ್ಲಿ ಮೊದಲ ಬಾರಿಗೆ ವಿಶ್ವ ಛಾಯಾಗ್ರಹಣ ದಿನವನ್ನು ಘೋಷಿಸಿತು. ಆದರೆ ಜಾಗತಿಕ ಮಟ್ಟದಲ್ಲಿ ಛಾಯಾಚಿತ್ರಕ್ಕಿರುವ ಮನ್ನಣೆ ಗಮನಿಸಿ 2010ರ ಆಗಸ್ಟ್ 19 ರಂದು ವಿಶ್ವ ಮಟ್ಟದಲ್ಲಿ ಭಾರತವೂ ಸೇರಿದಂತೆ ಅಂದಾಜು 100 ದೇಶಗಳು ಆನ್ ಲೈನ್ ಗ್ಯಾಲರಿಗಳು ಮೊದಲ ಛಾಯಾಗ್ರಹಣ ದಿನವನ್ನು ಆಚರಿಸಿತು. ಮೊಟ್ಟ ಮೊದಲ ಬಾರಿಗೆ ನಡೆದ ಈ ಛಾಯಾಗ್ರಹಣ ದಿನ ನಂತರ ಇತಿಹಾಸದ ಪುಟ ಸೇರಿತು.

*💐 ಆಗಸ್ಟ್ 19 – ವಿಶ್ವ ಮಾನವೀಯ ದಿನ 💐*

*💕👬ಇಂದು ವಿಶ್ವ ಮಾನವೀಯ ದಿನ👬💕.*

ಮನುಷ್ಯನ ಕಷ್ಟಕ್ಕೆ ಸ್ಪಂದಿಸುವ, ತೊಂದರೆಗೆ ನೆರವಾಗುವ ಮಾನವ ತಾವಾದಿಗಳ ಸೇವೆಗೆ ಗೌರವ ನೀಡುವ ಸಲುವಾಗಿ ವಿಶ್ವ ಸಂಸ್ಥೆ ವಿಶ್ವ ಮಾನವೀಯ ದಿನವನ್ನು ಆಗಸ್ಟ್ 19 ರಂದು ಆಚರಿಸುತ್ತಿದೆ. ಮಾನವೀಯ ಸೇವೆಯಲ್ಲಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಕೆಲಸ ಮಾಡಿರುವ ಕಾರ್ಮಿಕರಿಗಾಗಿ ಮತ್ತು ವಿಶ್ವದಾದ್ಯಂತದ ಬಿಕ್ಕಟ್ಟಿನಿಂದ ಬಳಲುತ್ತಿರುವ ಜನರಿಗೆ ಬೆಂಬಲವನ್ನು ನೀಡುತ್ತಿರುವ ವ್ಯಕ್ತಿಗಳನ್ನು ಗೌರವಿಸುವ ಸಲುವಾಗಿ ವಿಶ್ವದಾದ್ಯಂತದ ಮಾನವೀಯ ದಿನವನ್ನು ಆಚರಿಸಲಾಗುತ್ತಿದೆ. ವಿಶ್ವ ಮಾನವೀಯ ದಿನವನ್ನು 2008 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಸ್ಥಾಪಿಸಿತು ಮತ್ತು ಇದನ್ನು ಅಧಿಕೃತವಾಗಿ 2009 ರಲ್ಲಿ ಆಚರಿಸಲಾಯಿತು.

*🌹 ಪ್ರಮುಖ ಘಟನೆಗಳು 🌹*

👉 ಆಗಸ್ಟ್ 19, 1662 ರಂದು ಮೊತ್ತ ಮೊದಲ ಕ್ಯಾಲ್ ಕ್ಯುಲೇಟರನ್ನು ಸಂಶೋಧಿಸಿ ಸಾಧ್ಯತೆಗಳ ಆಧುನಿಕ ಸಿದ್ಧಾಂತಕ್ಕೆ ಅಡಿಪಾಯ ಹಾಕಿದ ಫ್ರೆಂಚ್ ತತ್ವಜ್ಞಾನಿ ಮತ್ತು ಗಣಿತ ತಜ್ಞ ಬ್ಲೇಸ್ ಪಾಸ್ಕಲ್ ತನ್ನ 39ನೇ ವಯಸ್ಸಿನಲ್ಲಿ ಪ್ಯಾರಿಸ್ಸಿನಲ್ಲಿ ನಿಧನರಾದರು. ಈತನ ಗೌರವಾರ್ಥ ಒಂದು ಕಂಪ್ಯೂಟರ್ ಭಾಷೆಗೆ ‘ಪಾಸ್ಕಲ್’ ಎಂದು ಹೆಸರಿಡಲಾಗಿದೆ.

👉 ಆಗಸ್ಟ್ 19, 1757 ರಂದು ಈಸ್ಟ್ ಇಂಡಿಯಾ ಕಂಪೆನಿಯ ಮೊತ್ತ ಮೊದಲ ರೂಪಾಯಿ ನಾಣ್ಯವನ್ನು ಕಲ್ಕತ್ತದಲ್ಲಿ ಠಂಕಿಸಲಾಯಿತು.

👉 ಆಗಸ್ಟ್ 19, 1888 ರಂದು ಬೆಲ್ಜಿಯಂನಲ್ಲಿ ಮೊದಲ ಸೌಂದರ್ಯ ಸ್ಪರ್ಧೆ ನಡೆಯಿತು.

🎂 ಶಂಕರ ದಯಾಳ ಶರ್ಮ – ಆಗಸ್ಟ್ 19, 1918 ರಂದು ಜನಿಸಿದರು. ೧೯೯೨ರಿಂದ – ೧೯೯೭ರವರಗೆ ಭಾರತದ ರಾಷ್ಟ್ರಪತಿಯಾಗಿದ್ದರು. ಶಂಕರ್ ದಯಾಳ್ ಶರ್ಮಾ ಭಾರತದ ಒಂಬತ್ತನೇ ಅಧ್ಯಕ್ಷರಾಗಿದ್ದರು, 1992 ರಿಂದ 1997 ರವರೆಗೆ ಸೇವೆ ಸಲ್ಲಿಸಿದರು. ಅಧ್ಯಕ್ಷ ಸ್ಥಾನಕ್ಕೆ ಮುಂಚಿತವಾಗಿ, ಶರ್ಮಾ ಭಾರತದ ಎಂಟನೇ ಉಪಾಧ್ಯಕ್ಷರಾಗಿದ್ದರು. ಅವರು ಭೋಪಾಲ್ ರಾಜ್ಯದ ಮುಖ್ಯಮಂತ್ರಿಯಾಗಿದ್ದರು (1952 – 1956), ಮತ್ತು ಶಿಕ್ಷಣ, ಕಾನೂನು, ಲೋಕೋಪಯೋಗಿ, ಕೈಗಾರಿಕೆ ಮತ್ತು ವಾಣಿಜ್ಯ, ರಾಷ್ಟ್ರೀಯ ಸಂಪನ್ಮೂಲಗಳು ಮತ್ತು ಪ್ರತ್ಯೇಕ ಕಂದಾಯದ ಖಾತೆಗಳನ್ನು ಹೊಂದಿರುವ ಕ್ಯಾಬಿನೆಟ್ ಮಂತ್ರಿಯಾಗಿದ್ದರು (1956 – 1967).

👉 ಆಗಸ್ಟ್ 19, 1949 ರಂದು ಭುವನೇಶ್ವರವು ಒರಿಸ್ಸಾ ರಾಜ್ಯದ ರಾಜಧಾನಿಯಾಯಿತು. ಅದಕ್ಕೂ ಮುಂಚೆ ರಾಜಧಾನಿ ಕಟಕ್ ಆಗಿತ್ತು.

*💐 ಎಂ. ಎಚ್. ಕೃಷ್ಣ. 💐*

🎂 ಕೃಷ್ಣ ಅವರು ಹುಟ್ಟಿದ್ದು 1892 ನೇ ಆಗಸ್ಟ್ 19 ರಂದು.

👉 ಮೈಸೂರುಹಟ್ಟಿ ಕೃಷ್ಣ ಅಯ್ಯಂಗಾರ್ ಅವರು ಮೈಸೂರು ಮಹಾರಾಜರ ಕಾಲದ ಪ್ರಸಿದ್ಧ ಇತಿಹಾಸ ತಜ್ಞ, ಇಂಡಾಲಜಿ ಪರಿಣಿತ, ಪುರಾತತ್ವ ಮತ್ತು ನಾಣ್ಯಶಾಸ್ತ್ರ ಪರಿಣಿತರು. ಇಪ್ಪತ್ತನೇ ಶತಮಾನದ ಪೂರ್ವಾರ್ಧದಲ್ಲಿ ಗಣನೀಯ ಕಾರ್ಯ ಮಾಡಿದ ಸಾಧಕ. ಅತ್ಯುತ್ತಮ ಶೈಕ್ಷಣಿಕ ಹಿನ್ನೆಲೆ, ಧಾರಾಳ ಅವಕಾಶ ಮತ್ತು ದಣಿವರಿಯದ ಪರಿಶ್ರಮ ಅವರ ಯಶಸ್ಸಿಗೆ ಕಾರಣ. ಉತ್ಖನನದಲ್ಲಿ ತರಭೇತಿಯನ್ನು ವಿದೇಶದಲ್ಲಿ ಪಡೆದ ಮೊದಲ ಕನ್ನಡಿಗರು.

👉 ಕೃಷ್ಣ ಅವರು ಕ್ರಿ. ಶ. 350ರ ಕಾಲದ ಹಲ್ಮಿಡಿ ಕನ್ನಡ ಶಾಸನವನ್ನು ಗುರುತಿಸಿದ ಕೀರ್ತಿಗೆ ವಂದ್ಯರೆನಿಸಿದ್ದಾರೆ. ಕೃಷ್ಣ ಅವರು ಪುರಾತತ್ವ ಕ್ಷೇತ್ರದಲ್ಲಿ ಅನೇಕ ಮಹತ್ತ್ವಪೂರ್ಣ ಸಂಶೋಧನೆಗಳನ್ನು ಮಾಡಿದರು.

👉 ಕೃಷ್ಣ ಅವರು ಪ್ರಕಟಿಸಿದ ಪುರಾತತ್ವ ಇಲಾಖೆ ವರದಿಗಳೂ (1929-1945) ಮೈಸೂರು ಮತ್ತು ಹಾಸನಗಳ ಶಾಸನ ಗ್ರಂಥಗಳೂ ವಿದ್ವತ್ಪೂರ್ಣವಾಗಿಯೂ ಅತ್ಯಂತ ಉಪಯುಕ್ತವೂ ಅದಂಥವು. ಕೃಷ್ಣ ಅವರು ಸುಮಾರು 2000 ಶಾಸನಗಳನ್ನು ಶೋಧಿಸಿದ ಮಹತ್ಕಾರ್ಯ ಸಾಧಿಸಿದ್ದು ಮೇಲ್ಕಂಡ ದಾಖಲೆಗಳಲ್ಲಿ ಕಾಣಬರುತ್ತದೆ. ಇವೆಲ್ಲವನ್ನೂ ಎಪಿಗ್ರಾಫಿಯಾ ಕರ್ನಾಟಿಕಾದಲ್ಲಿ ದಾಖಲಿಸಲಾಗಿದೆ.

👉 ಕೃಷ್ಣ ಅವರಿಗೆ ಲಂಡನ್ನಿನ ಫೆಲೋ ಆಫ್ ರಾಯಲ್ ನ್ಯುಮಿಸ್ಮ್ಯಾಟಿಕ್ಸ್ ಸೊಸೈಟಿ ಮತ್ತು ರಾಯಲ್ ಆಂಥ್ರೋಪಾಲಜಿಕಲ್ ಇನ್ಸ್ಟಿಟ್ಯೂಟ್ ಗೌರವಗಳು ಸಂದವು.

👉 ಕೃಷ್ಣ ಅವರು 1947 ಡಿಸೆಂಬರ್ 23 ರಂದು ನಿಧನರಾದರು.

Leave a Reply

Your email address will not be published. Required fields are marked *