ಅಥಣಿ : ಇತ್ತೀಚೆಗೆ ಖಾಸಗಿ ಪೈನಾನ್ಸ್ ಗಳಿಂದ ಕಿರುಕುಳ ಹೆಚ್ಚುತ್ತಿದ್ದು.ಎಲ್ಲ ಕಡೆಗಳಲ್ಲಿ ಅವಾಚ್ಯ ಶಬ್ದಗಳಿಂದ ಬೈದು ಹೊಡಿಬಡಿ ಮಾಡಿ ವಸೂಲಿ ಮಾಡುವ ಪ್ರವೃತ್ತಿಗಳು ಬೆಳಕಿಗೆ ಬರುತ್ತಿವೆ.
ಅಥಣಿ ತಾಲೂಕಿನ ಸಪ್ತಸಾಗರ ಗ್ರಾಮದಲ್ಲಿ ವಾಯಾ ಎಂಬ ಖಾಸಗಿ ಫೈನಾನ್ ನವರು ವಾರದ ಕಂತಿಗಾಗಿ ಪ್ರಮೋದ ಸಿಂಗೆ ಅವರ ಮನೆಗೆ ಆಗಮಿಸಿದ್ದಾರೆ ಮನೆಯಲ್ಲಿ ಇಲ್ಲದನ್ನ ನೋಡಿ ವಾಪಸಾಗುವಾಗ ವಿದ್ಯಾನಗರದಲ್ಲಿ ಪ್ರಮೋದ ಸಿಂಗೆ ಭೇಟಿಯಾಗಿದ್ದಾನೆ. ಫೈನಾನ್ಸ್ ಸಿಬ್ಬಂದಿ ನೀನು ಈ ವಾರದ ಕಂತು ತುಂಬಲೇಬೇಕು ಇಲ್ಲದಿದ್ದಲ್ಲಿ ನಿನ್ನ ಬಿಡುವದಿಲ್ಲ ಎಂದು ಆವಾಜ್ ಹಾಕಿದ್ದಾರೆ
ಪ್ರಮೋದ ಸಿಂಗೆ ಎಂಬಾತ ಇವತ್ತು ನನ್ನ ಹತ್ತಿರ ಸದ್ಯ ಹಣವಿಲ್ಲ ನಾಳೆ ಹನ್ನೊಂದು ಗಂಟೆಯೊಳಗಾಗಿ ತುಂಬುತ್ತೇನೆ ದಯವಿಟ್ಟು ಸಹಕರಿಸಿ ಎಂದು ಬೇಡಿಕೊಂಡಿದ್ದಾನೆ ಆದರೆ ಅದಕ್ಕೆ ಬಗ್ಗದ ವಾಯಾ ಫೈನಾನ್ಸ್ ಸಿಬ್ಬಂದಿಗಳು ಆವಾಚ್ಯವಾಗಿ ನಿಂದಿಸಿದಲ್ಲದೆ ಮನಬಂದಂತೆ ಮಾರಣಾಂತಿಕವಾಗಿ ಹಲ್ಲೆ ಮಾಡಿ ಸ್ಥಳದಿಂದ ಓಡಿ ಹೋಗಿದ್ದಾರೆ.
ಇಂತಹ ಪ್ರಕರಣಗಳನ್ನ ಸಂಭಂಧಪಟ್ಟ ಇಲಾಖಾಧಿಕಾರಿಗಳು ಪರಿಗಣಿಸಿ ಸೂಕ್ತ ಕಾನೂನುಕ್ರಮ ಜರುಗಿಸುತ್ತಾರಾ ಕಾಯ್ದು ನೋಡಬೇಕಿದೆ