ಗೌರಿಬಿದನೂರು: ಜಿಲ್ಲೆಯ ಗೌರಿಬಿದನೂರು ತಾಲೂಕಿನ ನಡುವಳಹಳ್ಳಿ ಗ್ರಾಮದ ನಂಜುಂಡಯ್ಯ ಹಾಗೂ ರಾಮಾಂಜಿನಪ್ಪ ನವರ ಆಸ್ತಿ ವಿಚಾರಕ್ಕೆ ಗಲಾಟೆ ಶುರುವಾಗಿದೆ. ಇದೇ ವೇಳೆ ಮಾತಿಗೆ ಮಾತು ಬೆಳೆದು ದೊಣ್ಣೆ ಕಲ್ಲುಗಳಿಂದ ಬಡೆದುಕೊಳ್ಳುವ ವಾತಾವರಣ ನಿರ್ಮಾಣವಾಗಿದ್ದು. ಇದೇ ವೇಳೆ ತಮ್ಮನ ಮಕ್ಕಳು ದೊಡ್ಡಪ್ಪನ ಮೇಲೆ ತೀರ್ವ ಹಲ್ಲೆ ನಡೆಸಿದ ಪರಿಣಾಮ ಅಣ್ಣ ನಂಜುಂಡಯ್ಯ ಸಾವನ್ನಪ್ಪಿರುವ ಘಟನೆ ಗೌರಿಬಿದನೂರು ತಾಲೂಕಿನ ನಡುವಳಹಳ್ಳಿ ಗ್ರಾಮದಲ್ಲಿ ನಡೆದಿದೆ.
ಇನ್ನು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ನಡುವಳಹಳ್ಳಿ ಗ್ರಾಮದಲ್ಲಿ ಕಳೆದ ಸಂಜೆ ಪಿತ್ರಾರ್ಜಿತ ಆಸ್ತಿಯ ವಿಚಾರವಾಗಿ ಅಣ್ಣ ನಂಜುಂಡಯ್ಯ 55 ವರ್ಷ ಹಾಗೂ ತಮ್ಮ ರಾಮಾಂಜಿನಪ್ಪ ಅವರ ಮಕ್ಕಳು ಜಗಳವಾಡಿ ಜಗಳ ವಿಕೋಪಕ್ಕೆ ಹೋದಾಗ ತಮ್ಮ ಹಾಗೂ ತಮ್ಮನ ಮಕ್ಕಳು ಸೇರಿ ಕಲ್ಲು ದೊಣ್ಣೆಗಳಿಂದ ಅಣ್ಣನ ಮೇಲೆ ದಾಳಿ ಮಾಡಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
ಇದೇ ವೇಳೆ ಗಾಯಗೊಂಡನಂಜುಂಡಪ್ಪನನ್ನು ಸಾರ್ವಜನಿಕ ಆಸ್ಪತ್ರೆಗೆ ಸೇರಿಸಿ ಪ್ರಥಮ ಚಿಕಿತ್ಸೆ ಕೊಡಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಇಂದು ನಂಜುಂಡಪ್ಪ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಇನ್ನು ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಕುಶಾಲ್ ಚೌಕ್ಸೆ, ಪಿಎಸ್ಐ ರಮೇಶ್ ಗುಗ್ರಿ ಹಾಗೂ ಪಿಎಸ್ಐ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.