ಕೆ.ಆರ್.ಪೇಟೆ: ತಾಲ್ಲೂಕಿನ ಗಡಿ ಭಾಗದಲ್ಲಿರುವ ಸಂತೆಬಾಚಹಳ್ಳಿ ಹೋಬಳಿಯ ಭಾರತಿಪುರ ಕ್ರಾಸ್ ಪಂಚಾಯತಿ ವ್ಯಾಪ್ತಿಯಲ್ಲಿರುವ ಮಾರೇನಹಳ್ಳಿ ಗ್ರಾಮದಲ್ಲಿ ಘಟನೆ ಜರುಗಿದೆ.

ಘಟನೆ ಕುರಿತು ಮಾತನಾಡಿದ ಮಾಹಿತಿ ನೀಡಿದ ಗ್ರಾಮದ ಮುಖಂಡ ಯೋಗೇಶ್ ಅವರು ಎಂದಿನಂತೆ ಕಳೆದ ನಾಲ್ಕು ದಿನಗಳ ಹಿಂದೆ ಗ್ರಾಮ ಜನರು ಗ್ರಾಮದಲ್ಲಿರುವ ಕೊಳವೆಬಾವಿ ಹಾಗೂ ಪಂಚಾಯತಿಯಿಂದ ಬಿಡುವ ನೀರು ಸೇವಿಸಿದಾರೆ ಆದರೆ ಕೊಳವೆ ಬಾವಿ ನೀರು ಸೇವಿಸಿದ ಜನರು ಆರೋಗ್ಯಕರವಾಗಿದ್ದಾರೆ.

ಪಂಚಾಯಿತಿಯಿಂದ ಬಿಡುವ ನಲ್ಲಿ ನೀರು ಸೇವಿಸಿದವರು ಮಾತ್ರ ತೀವ್ರ ವಾಂತಿ ಭೇದಿಯಿಂದ ಗ್ರಾಮದ ಹಿರಿಯ ಮಹಿಳೆ ಜವರಮ್ಮ,ಚಿಕ್ಕಮ್ಮ, ಮೃತಪಟ್ಟಿದ್ದಾರೆ. 4 ಮಂದಿ ಹಾಸನ ಜಿಲ್ಲಾ ಆಸ್ಪತ್ರೆಯ ತುರ್ತು ಘಟಕ ದಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದರೆ ಉಳಿದ ರೋಗಿಗಳು ನೆರೆಯ ತಾಲ್ಲೂಕು ಚನ್ನರಾಯಪಟ್ಟಣ ಹಾಗೂ ಶ್ರಾವಣಬೆಳಗೊಳ ಸಾರ್ವಜನಿಕ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಾದಾರೆ.

ಘಟನೆ ಜರುಗಿ ನಾಲ್ಕು ದಿನಗಳು ಕಳೆದರೂ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದೆ ಕಾಟ ಆಚಾರಕ್ಕೆ ಗ್ರಾಮಕ್ಕೆ ಆಗಮಿಸಿ ತೆರಳುತ್ತಿದ್ದಾರೆ. ಜಿಲ್ಲೆ ಮತ್ತು ತಾಲೂಕು ಆಡಳಿತ, ಸಂಬಂಧಪಟ್ಟ ಇಲಾಖೆ ಕೂಡ ಕಣ್ಮುಚ್ಚಿ ಕುಳಿತಿದೆ ಹಾಗೂ ನಮ್ಮ ಗ್ರಾಮದ ಜನರು ಕಲುಷಿತ ನೀರು ಸೇವಿಸಿ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ ಎಂದು ವೈದ್ಯರ ಮೂಲಗಳು ತಿಳಿಸುತ್ತೇವೆ ಎಂದು ಆರೋಪಿಸಿ ಸೂಕ್ತ ಕ್ರಮಕ್ಕೆ ಅಗ್ರಹಿಸಿದರು.

Leave a Reply

Your email address will not be published. Required fields are marked *