ಗೌರಿಬಿದನೂರು: ತರಕಾರಿ ಮಾರುವ ವಿಚಾರದಲ್ಲಿ ಮೈಕ್ ಬಳಸಿ ಅಧಿಕ ಶಬ್ದದಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದನ್ನು ಪ್ರಶ್ನಿಸಿದಕ್ಕೆ ಪರಸ್ಪರ ಮಚ್ಚು ಲಾಂಗ್ ಗಳನ್ನು ಹಿಡಿದು ಬಡೆದುಕೊಂಡು ಸಾರ್ವಜನಿಕರಲ್ಲಿ ಭಯ ಮೂಡಿಸಿದ ಘಟನೆ ಗೌರಿಬಿದನೂರು ನಗರದಲ್ಲಿ ನಡೆದಿದೆ.

ಕಳೆದ ರಾತ್ರಿ ಆಗಸ್ಟ್ 28 ರ ರಾತ್ರಿ 7 ರಿಂದ 8 ಗಂಟೆ ಸಮಯದಲ್ಲಿ ನಗರದ ಮಧುಗಿರಿ ಬಸ್ ನಿಲ್ದಾಣ ಸಮೀಪ ತರಕಾರಿ ಮಾರುತ್ತಿದ್ದ ರಬತ್ ಅಲಿ ಹಾಗೂ ಆಲಿರಾಜಾ ಮತ್ತು ಮಹಮದ್ ರಫೀಕ್ ಅಲಿಯಾಸ್ ಡ್ಯಾನಿಷ್ ಹಾಗೂ ನಹೀಮ್ ಖಾನ್ ನಡುವೆ ಜಗಳ ಶುರುವಾಗಿದೆ

ಇನ್ನೂ ಪ್ರತಿನಿತ್ಯವು ಅಲಿಪುರ ಗ್ರಾಮದ ರಬತ್ ಅಲಿ ಆಲಿರಾಜಾ ನಗರದ ಮಧುಗಿರಿ ಬಸ್ ನಿಲ್ದಾಣ ಸಮೀಪ ತರಕಾರಿ ಮಾರುತ್ತಿದ್ದರು. ಆದರೆ ಅಧಿಕ ಶಬ್ದದ ಮೈಕ್ ಬಳಸಿ ತರಕಾರಿ ಮಾರುತ್ತಿದ್ದು ಇದನ್ನು ಸಾರ್ವಜನಿಕರು ಹಾಗೂ ಪೊಲೀಸರು ಸಹಾ ಸಾಕಷ್ಟು ಬಾರೀ ಪ್ರಶ್ನಿಸಿದ್ದರು ಯಾವುದೇ ಪ್ರಯೋಜನ ವಿಲ್ಲದಂತಾಗಿದೆ. ಸದ್ಯ ಇದೇ ವಿಚಾರವಾಗಿ ನಗರಠಾಣೆಯಲ್ಲಿ ರೌಡಿ ಶೀಟರ್ ಆಗಿದ್ದ ಡ್ಯಾನಿಷ್ ಶಬ್ದವನ್ನು ಕಡಿಮೆ ಮಾಡಿ ವ್ಯಾಪಾರ ಮಾಡುವಂತೆ ಸೂಚಿಸಿದ್ದಾರೆ.

ಈ ವಿಚಾರವಾಗಿ ಮಾತಿಗೆ ಮಾತು ಬೆಳೆದು ಆಲಿಪುರ ಗ್ರಾಮದ ಮೂಲದ ರಬತ್ ಅಲಿ (35) ಮತ್ತು ಆಲಿರಾಜಾ (28) ಹಾಗೂ ಮಹಮ್ಮದ್ ರಫೀಕ್ ಅಲಿಯಾಸ್ ಡ್ಯಾನಿಷ್ (31), ಟಿಪ್ಪು ನಗರ ನಿವಾಸಿ ಮತ್ತು ನಗರಠಾಣೆಯ ರೌಡಿಶೀಟರ್, ಹಾಗೂ ನಹೀಮ್ ಖಾನ್ (29) ಮಿಟ್ಟೇನಹಳ್ಳಿಯ ನಗರ ನಿವಾಸಿಗಳ ಮಧ್ಯೆ ಮಧುಗಿರ ಬಸ್ ನಿಲ್ದಾಣ ಸಮೀಪ ಗಲಾಟೆ ನಡೆದಿದೆ.

ಸಾರ್ವಜನಿಕರು ಓಡಾಡುತ್ತಿದ್ದ ಸ್ಥಳದಲ್ಲಿ ಆರೋಪಿಗಳು ಮಚ್ಚು ಮತ್ತು ಚಾಕುಗಳನ್ನು ಹಿಡಿದು ಪರಸ್ಪರ ಹಲ್ಲೆ ಮಾಡಿದ್ದಾರೆ. ಇದೇ ಘಟನೆಯಲ್ಲಿ ಡ್ಯಾನಿಷ್ ತಮ್ಮ ನಹೀಮ್ ಖಾನ್ ಗೆ ಗಾಯಗಳಾಗಿದ್ದು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ರವಾನಿಸಲಾಗಿದೆ. ಇನ್ನೂ ಈ ಘಟನೆಯು ಸಾರ್ವಜನಿಕರಲ್ಲಿ ಸಾಕಷ್ಟು ಭಯ ಮೂಡಿಸಿದ್ದು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ವೀಡಿಯೋ ಸೆರೆ ಮಾಡಿಕೊಂಡಿದ್ದಾರೆ.

Leave a Reply

Your email address will not be published. Required fields are marked *