ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ & ಉಪಾಧ್ಯಕ್ಷ ಸ್ಥಾನದ ಚುನಾವಣೆ ತಡವಾಗಿದ್ದು,ಬಿಜೆಪಿ- ಜೆಡಿಎಸ್ 17 ಜನಕ್ಕೂ ಹೆಚ್ಚು ನಗರಸಭಾ ಸದಸ್ಯರು ಮಾನ್ಯ ಜಿಲ್ಲಾಧಿಕಾರಿಗಳಾದ ಪಿ ಎನ್ ರವೀಂದ್ರ ಅವರಿಗೆ ಆದಷ್ಟು ಬೇಗನೆ ಚುನಾವಣೆ ನಡೆಯಬೇಕೆಂದು ಮನವಿ ಸಲ್ಲಿಸಿದ್ದಾರೆ,
ಇನ್ನು ಚಿಕ್ಕಬಳ್ಳಾಪುರ ನಗರಸಭೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ರಾಜ್ಯ ವಿಧಾನ ಪರಿಷತ್ತಿನ ಸದಸ್ಯರನ್ನು ಹಾಲಿ ಚಿಕ್ಕಬಳ್ಳಾಪುರ ನಗರಸಭೆ ವ್ಯಾಪ್ತಿಯಲ್ಲಿ ಮುಂಬರುವ ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಮತದಾನ ಪ್ರಕ್ರಿಯೆಯಲ್ಲಿ ಮತ ಚಲಾವಣೆಯ ಉದ್ದೇಶಕೋಸ್ಕರ ಮತದಾನಕ್ಕಾಗಿ ಮತದಾನ ಪಟ್ಟಿಯಲ್ಲಿ ಸೇರ್ಪಡೆ ಮಾಡಿಕೊಳ್ಳಲು ಫೋರಂ ಎಂಟನ್ನು ಪಡೆದು ನಗರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ,
ಇದನ್ನು ತಡೆಯಲು ಆದಷ್ಟು ಬೇಗನೆ ಚುನಾವಣೆ ಯನ್ನು ನಿಗದಿ ಮಾಡಬೇಕೆಂದು ಮಾನ್ಯ ಜಿಲ್ಲಾಧಿಕಾರಿಗಳಲ್ಲಿ ಮನವಿ ಸಲ್ಲಿಸಿದ್ದಾರೆ, ಆದರೆ ಕಾಂಗ್ರೆಸ್ ಪಕ್ಷದವರು ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ದುರುದ್ದೇಶದಿಂದ ಬಹಳಷ್ಟು ಉನ್ನಾರ ನಡೆಯುತ್ತಿದೆ, ಹಿತ ಶಾಸಕ ಪ್ರದೀಪ್ ಈಶ್ವರ್ ಕೈವಾಡ ಇರಬಹುದು ಎಂಬ ಆರೋಪವೂ ಇದೆ, ಆದರೆ ಎಲ್ಲ ಜಿಲ್ಲೆಗಳಲ್ಲಿ ನಗರಸಭೆ ಚುನಾವಣೆ ಪೂರ್ಣಗೊಳ್ಳುತ್ತಿದ್ದು,
ನಮ್ಮ ಜಿಲ್ಲೆಯಲ್ಲಿ ಮಾತ್ರ ಇನ್ನು ನಗರಸಭೆ ಚುನಾವಣೆ ನಡೆಸಲು ಇಂದು ಮುಂದ ನೋಡುತ್ತಿದ್ದಾರೆ ಇದು ಯಾವ ಕಾರಣಕ್ಕಾಗಿ ಎಂದು ಗೊತ್ತಾಗುತ್ತಿಲ್ಲ, ಅದೇನೆ ಆಗಲಿ ಸಂಸದ ಸುಧಾಕರ್ ನಗರಸಭೆ ಚುನಾವಣೆಯಲ್ಲಿ ಗೆಲುವಾದರೆ, ಹಿತ ಶಾಸಕ ಪ್ರದೀಪ್ ಈಶ್ವರ್ ಸೋಲು ಖಚಿತ ಎಂದು ನವೀನ್ ಕಿರಣ್ ತಿಳಿಸಿದ್ದಾರೆ.