ಶ್ರದ್ಧಾ ಭಕ್ತಿ ಕೇಂದ್ರವಾಗಿರುವ ತಾಲ್ಲೂಕಿನ ಬೂಕನಕೆರೆ ಹೋಬಳಿಯ ಗವಿಮಠ ಶ್ರೀ ಸ್ವತಂತ್ರ ಸಿದ್ದಲಿಂಗೇಶ್ವರ ದೇವಾಲಯದಲ್ಲಿ ಕಡೆ ಶ್ರಾವಣ ಸೋಮವಾರ ಅಮಾಸೆಯ ಪ್ರಯುಕ್ತ ಪವಾಡ ಪುರುಷ ಶ್ರೀ ಸ್ವತಂತ್ರ ಸಿದ್ಧಲಿಂಗೇಶ್ವರ ಗದ್ದಿಗೆ ಗವಿಮಠದ ಪೀಠಾಧ್ಯಕ್ಷ ಶ್ರೀ ಚೆನ್ನವೀರ ಮಹಾಸ್ವಾಮೀಜಿಗಳ ನೇತೃತ್ವದಲ್ಲಿ ದೇವಾಲಯದ ಮುಖ್ಯ ದ್ವಾರದಿಂದ ಗರ್ಭಗುಡಿಯವರೆಗೆ ಐದು ಸಾವಿರಕ್ಕೂ ಹೆಚ್ಚು ವಿಳ್ಳೆದೆಲೆ ವಿವಿಧ ಬಗ್ಗೆ ಫಲ,ಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು.
ಮುಂಜಾನೆಯಿಂದಲೇ ಶ್ರೀಗಳಿಗೆ ವಿಶೇಷ ಅಭಿಷೇಕ,ಹೋಮ-ಹವನ ತುಪ್ಪದ ದೀಪಾರತಿ, ನೆರವೇರಿಸಿದರು.ಭಕ್ತರು ಬೆಳಿಗ್ಗೆಯಿಂದಲೇ ದೇವಾಲಯದ ಆವರಣದಲ್ಲಿ ಸೇರಿದ್ದ ಭಕ್ತರು ಭಗವಂತನ ದರ್ಶನ ಪಡೆದು ವಿವಿಧ ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾದರು.
ಪೂಜಾ ಕಾರ್ಯಕ್ರಮದ ನಂತರ ಭಕ್ತಾದಿಗಳಿಗೆ ಆಶೀರ್ವಚನ ನೀಡಿದ ಪೀಠಾಧ್ಯಕ್ಷ ಶ್ರೀ ಚನ್ನವೀರ ಮಹಾಸ್ವಾಮೀಜಿ ಜಗತ್ತು ವೇಗವಾಗಿ ಬೆಳೆಯುತ್ತಿದೆ. ಈ ಬೆಳವಣಿಗೆಗಳ ನಡುವೆಯೂ ನಮ್ಮ ಆಚರಣೆಗಳನ್ನು ಉಳಿಸಿ ಬೆಳೆಸಿಕೊಳ್ಳಬೇಕು. ನಾಗರಿಕರು ಸನ್ಮಾರ್ಗದಲ್ಲಿ ನಡೆಯಬೇಕು. ದೇವರ ಕಾರ್ಯಗಳು ಜನರಲ್ಲಿ ನೆಮ್ಮದಿಯ ಭಾವನೆಯನ್ನು ಮೂಡಿಸುತ್ತವೆ ಎಂದು ಹೇಳಿದರು.
ಪೂಜಾ ಕಾರ್ಯಕ್ರಮದಲ್ಲಿ ಸಮಾಜ ಸೇವಕ ಆರ್ ಟಿ ಓ ಮಲ್ಲಿಕಾರ್ಜುನ್, ಮುಖಂಡ ಕಟ್ಟಹಳ್ಳಿ ಪ್ರಕಾಶ್, ಶೈಲೇಂದ್ರ,ಅಶೋಕ್, ಚಿಕ್ಕರಾಜು, ಸಮಾಜ ಸೇವಕ ಆರ್ ಟಿ ಓ ಮಲ್ಲಿಕಾರ್ಜುನ್ ಗಂಜೀಗೆರೆ ಮಹೇಶ್, ರವಿ ಕುಮಾರ್,ದೇವಾಲಯದ ಅರ್ಚಕ ಹೇಮಂತ್,ಸೇರಿದಂತೆ ಭಕ್ತರಿದ್ದರು.