ನಿಮ್ಮ ತಂದೆ-ತಾಯಿಗೆ ಆಸರೆಯಾಗಿ ಬಾಳದಿದ್ದರು ಪರವಾಗಿಲ್ಲ ಸುಮ್ಮನೆ ಮನೆಯಲ್ಲಿ ಇರಿ. ಅದು ಬಿಟ್ಟು ಗ್ಯಾಂಗ್ ಕಟ್ಟಿಕೊಂಡು ರೌಡಿಸಿಂ ಮಾಡಿದ್ರೆ ಮುಗಿತು ಕಥೆ. ನಿಮ್ಮನ್ನಾ ಬುಡ ಸಮೇತ ಕಿತ್ತುಹಾಕುತ್ತೇವೆ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ರೌಡಿಗಳಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆವಾಗಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್ ನಿಂದ ಬೃಹತ್ ರೌಡಿ ಪೆರೇಡ್ ನಡೆಸಿ 15 ಠಾಣೆಗಳಿಂದ 800 ಕ್ಕೂ ರೌಡಿಗಳಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ನೀವು ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಜೀವನ ನಡೆಸಿದ್ರೆ ಸರಿ, ಇಲ್ಲಾ ನಿಮ್ಮ ಜೀವನದಲ್ಲಿ ನಾವು ಎಂಟ್ರೀ ಆಗತ್ವಿ. ನೀವು ಚೆನ್ನಾಗಿ ಜೀವನ ನಡೆಸಿದರೆ ನಾವೇ ನಿಮ್ಮ ರೌಡಿ ಶಿಟರ್ ತೆಗೆದು ಹಾಕ್ತಿವಿ. ಅದು ಬಿಟ್ಟು ಬಾಲ ಬಿಚ್ಚಿದ್ರೆ ಪರಿಣಾಮ ಚೆನ್ನಾಗಿರಲ್ಲ ಅಂತ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ..