ಪಾಯಸ ಅಂದ್ರೆ ಎಲ್ರಿಗೂ ಇಷ್ಟ ಇದರಲ್ಲಿ ನಾನಾರೀತಿಯಾದ ಪಾಯಾಸಗಳನ್ನು ಮಾಡಬಹುದು ಅದರಲ್ಲೂ ಅಕ್ಕಿ ಇಂದ ಮಾಡುವ ಅನ್ನದ ಪಾಯಸ ಆಹಾ ನಾಲಿಗೆಗೆ ರುಚಿಯೋ ರುಚಿ ..ಇನ್ನೂ ತಡ ಯಾಕೆ ಬನ್ನಿ ಅನ್ನದ ಪಾಯಸ ಮಾಡೋದೇಗೆ ನೋಡೋಣ;-
ಬೇಕಾಗುವ ಸಾಮಾಗ್ರಿಗಳು;-
1/2 ಕಪ್ ಬಾಸ್ಮತಿ ಅಕ್ಕಿ
1&1/2 ಲೀಟರ್ ಹಾಲು
1/2 ಕಪ್ ಸಕ್ಕರೆ
3 ಚಮಚ ಬಾದಾಮಿ, ಗೋಡಂಬಿ, ಪಿಸ್ತಾ ಪುಡಿ
ಒಂದು ಚಿಟಿಕೆ ಏಲಕ್ಕಿ
ಕೇಸರಿ
ಮಾಡುವ ವಿಧಾನ ;-
ಅಗಲವಾದ ಬಾಣಲೆಯಲ್ಲಿ ಹಾಲನ್ನು ಹಾಕಿ ಮತ್ತು ಕುದಿಸಿ. ಕುದಿಯುತ್ತಿರುವ ಹಾಲನ್ನು ಕೆನೆಕಟ್ಟಲು ಬಿಡದೇ ಮಿಶ್ರಣ ಮಾಡುತ್ತಿರಿ.
ನಂತರ ಬಾಸ್ಮತಿ ಅಕ್ಕಿಯನ್ನು ಚೆನ್ನಾಗಿ ತೊಳೆದು, ಕುದಿಯುವ ಹಾಲಿಗೆ ಸೇರಿಸಿ ಮತ್ತು ಮಧ್ಯಮ ಉರಿಯಲ್ಲಿ ಕುದಿಸಿ.
ಅಕ್ಕಿ ಚೆನ್ನಾಗಿ ಬೆಂದ ನಂತರ ಕೇಸರಿ ಮತ್ತು ಸಕ್ಕರೆ ಹಾಕಿ. ಚೆನ್ನಾಗಿ ಕುದಿಸಿ. ಹಾಲು ಚೆನ್ನಾಗಿ ಬರಿದಾದ ನಂತರ, ಅಕ್ಕಿ ಮತ್ತು ಸಕ್ಕರೆಯನ್ನು ಚೆನ್ನಾಗಿ ಬೇಯಿಸಲಾಗುತ್ತದೆ ಮತ್ತು ಕೆನೆ ಸ್ಥಿರತೆಯನ್ನು ಪಡೆಯಲಾಗುತ್ತದೆ, ಕೇಸರಿ, ಏಲಕ್ಕಿ ಪುಡಿ ಮತ್ತು ತುರಿದ ಬೀಜಗಳನ್ನು ಸೇರಿಸಿ ನಂತರ ರುಚಿಯಾದ ಅಕ್ಕಿ ಪಾಯಸ ಸಿದ್ಧವಾಗಿದೆ.