ಅದೆಷ್ಟೋ ಕ್ರೀಡಾ ಅಭಿಮಾನಿಗಳಿಗೆ ಕ್ರಿಕೆಟ್ ಎಂದರೇ ತುಂಬಾನೆ ಅಚ್ಚುಮೆಚ್ಚು . ಮುದುಕರಿಂದ ಹಿಡಿದು ಪುಟ್ಟ ಬಾಲಕರ ವರೆಗೂ ಕ್ರಿಕೆಟ್ ಮೇಲೆ ತುಂಬಾನೆ ಇಷ್ಟ ಎಂತಲೇ ಹೇಳಬಹುದು. ಇನ್ನೂ ಈ ಕ್ರಿಕೆಟ್ ಕಾಮೆಂಟ್ರಿಯನ್ನು ಇಂಗ್ಲೀಷ್, ಹಿಂದಿ, ಕನ್ನಡ ,ತೆಲುಗು ಹಾಗೂ ಇನ್ನೂ ಮೊದಲಾದ ಭಾಷೆಗಳಲ್ಲಿ ಕೇಳಿರುತ್ತೇವೆ. ಆದರೆ ನೀವು ಇಲ್ಲಿ ಈ ಕ್ರಿಕೆಟ್ ಕಾಮೆಂಟ್ರಿಯನ್ನು ಕೇಳಿರೋಕೆ ಸಾಧ್ಯವೇ ಇಲ್ಲ. ಗಲ್ಲಿ ಕ್ರಿಕೆಟ್ ವೇಳೆ ಯುವಕನೋರ್ವ ಸಂಸ್ಕೃತದಲ್ಲಿ ಕಾಮೆಂಟ್ರಿ ಮಾಡಿದ್ದು, ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.
ಬಹುತೇಕರು ಕ್ರಿಕೆಟ್ ಪ್ರೇಮಿಗಳು ಕ್ರಿಕೆಟ್ ನೋಡಲು ದೇಶ ವಿದೇಶಗಳಿಗೂ ಹೋಗುತ್ತಾರೆ. ಕ್ರಿಕೆಟ್ ಅಂದರೇ ಅಷ್ಟೊಂದು ಹುಚ್ಚು ಅಂದರೇ ತಪ್ಪಾಗಲಾರದು. ಕ್ರೀಡಾಂಗಣದಲ್ಲಿ ಹೋಗಲು ಆಗದೇ ಇರುವವರು ಟಿವಿ, ಮೊಬೈಲ್ ಗಳಲ್ಲಿ ಲೈವ್ ನೋಡುತ್ತಾರೆ. ಕೆಲವರಿಗೆ ಕ್ರಿಕೆಟ್ ಕಾಮೆಂಟ್ರಿ ಕೇಳುವುದು ಸಹ ತುಂಬಾನೆ ಇಷ್ಟ ಎಂದು ಹೇಳಬಹುದು. ಇದೀಗ ಗಲ್ಲಿ ಕ್ರಿಕೆಟ್ ಆಡುತ್ತಿರುವಾಗ ಯುವಕನೋರ್ವ ಸಂಸ್ಕೃತದಲ್ಲಿ ಕಾಮೆಂಟ್ರಿ ಹೇಳಿದ್ದಾನೆ. ಈ ವಿಡಿಯೋ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಭಾರಿ ವೈರಲ್ ಆಗುತ್ತಿದೆ. ಹಂಚಿಕೊಂಡಿರುವ ಸಣ್ಣ ವಿಡಿಯೋ ಕ್ಲಿಪ್ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಸಖ್ಖತ್ ವೈರಲ್ ಆಗಿದೆ..
ಈ ಹುಡುಗನ ಕಾಮೆಂಟ್ರಿ ಎಲ್ಲರನ್ನೂ ಮೋಡಿ ಮಾಡಿದೆ ಎಂದೇ ಹೇಳಬಹುದು. ಬೆಂಗಳೂರಿನ ಯುವಕ ತುಂಬಾ ಉತ್ಸಾಹದಿಂದ ಸಂಸ್ಕೃತದಲ್ಲಿ ಕ್ರಿಕೆಟ್ ಮ್ಯಾಚ್ ಕಾಮೆಂಟ್ರಿ ಮಾಡಿದ್ದಾನೆ. ಬ್ಯಾಟ್ಸ್ ಮೆನ್ ಬಾಲ್ ಹೊಡೆಯುತ್ತಿದ್ದಂತೆ ಅವರ ಧ್ವನಿಯೂ ಸಹ ಆ ಕ್ಷಣದ ಉತ್ಸಾಹ ಎತ್ತಿ ತೋರಿಸುತ್ತಿದೆ. ಪಂದ್ಯ ವೀಕ್ಷಣೆ ಮಾಡುತ್ತಿದ್ದ ಎಲ್ಲರೂ ಯುವಕನ ಕಾಮೆಂಟ್ರಿ ಶೈಲಿಯಗೆ ಮನಸಾರೆ ಫಿದಾ ಆಗಿ ಆತನನ್ನು ಮತ್ತಷ್ಟು ಪ್ರೋತ್ಸಾಹಿಸಿ, ಹುರಿದುಂಬಿಸಿ, ಶ್ಲಾಘನೆ ಮಾಡಿದ್ದಾರೆ. ಇನ್ನೂ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಸದ್ದು ಮಾಡುತ್ತಿದೆ. ಅನೇಕರು ಕಾಮೆಂಟ್ರಿ ಮಾಡಿದ ಯುವಕನನ್ನು ಮನಸ್ಪೂರ್ತಿಯಾಗಿ ಹಾಡಿ ಹೊಗಳಿದ್ದಾರೆ.