ಮಕ್ಕಳ ಬೆಳವಣಿಗೆಗೆ ಶಿಕ್ಷಕರೆ ಕಾರಣ,ಆದರೆ ಶಿಕ್ಷಕರಿಗೆ ದಿನಾಚರಣೆಯ ಶುಭಾಶಯ ತಿಳಿಸಲು ಬಂದ ಲೋಯೋಲಾ ಶಾಲೆಯ ವಿದ್ಯಾರ್ಥಿಗಳು ಬಸ್ ಅಪಘಾತದಲ್ಲಿ ಗಾಯಗೊಂಡು ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕಪಗಲ್ ಕ್ರಾಸ್ ಬಳಿ ಸಂಭವಿಸಿದೆ.
ಲೋಯೋಲಾ ಶಾಲೆಯ ಬಸ್ ನಿತ್ಯ ಕುರ್ಡಿ ಗ್ರಾಮ ಸೇರಿ ಹತ್ತಾರು ಗ್ರಾಮದ ವಿದ್ಯಾರ್ಥಿಗಳನ್ನು ಕರೆದುಕೊಂಡು ಬರುತ್ತಿತ್ತು. ಆದರೆ ಶಿಕ್ಷಕರಿಗೆ ಶುಭಾಶಯ ತಿಳಿಸಲು ಖುಷಿಯಲ್ಲಿ ಬಂದ ನಾಲ್ವರು ವಿದ್ಯಾರ್ಥಿಗಳು ವಿದ್ಯಾರ್ಥಿಗಳು ಮಸಣ ಸೇರಿದರೆ ಸರಕಾರಿ ಬಸ್ ನ 21 ಪ್ರಯಾಣಿಕರು ಗಂಭೀರ ಗಾಯಗೊಂಡಿದ್ದಾರೆ.
ಸರಕಾರಿ ಬಸ್ ಹಾಗು ಲೋಯೋಲಾ ಶಾಲೆಯ ಬಸ್ ಅಪಘಾತಕ್ಕೆ ರಾಜ್ಯ ಹೆದ್ದಾರಿಯ ಗುಂಡಿಗಳೆ ಕಾರಣ,ಯಾಕಂದರೆ ಗುಂಡಿ ಮುಚ್ಚುವ ನೆಪದಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಣ ನುಂಗಿ ಹಾಕಿದ್ದರಿಂದ ಇದಕ್ಕೆ ಕಾರಣ ಎಂದು ಸಾಮಾಜಿಕ ಕಾರ್ಯಕರ್ತರ ಆರೋಪವಾಗಿದೆ.