ತಾಳಿಕೋಟಿ ತಾಲೂಕಿನ ಬಿ. ಸಾಲವಾಡಗಿ ಗ್ರಾಮದಲ್ಲಿ ಶ್ರಾವಣ ಮಾಸದ ನಿಮಿತ್ಯ ಒಂದು ತಿಂಗಳ ವರೆಗೆ ನಡೆದ ಮಹಾ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನ ಮಹಾಪುರಾಣ ಮಂಗಲೋತ್ಸವದ ಅಂಗವಾಗಿ ಬುಧವಾರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕುಂಭ ಕಳಸ ಸಕಲ ವಾದ್ಯ ಮೇಳ ಗಳೊಂದಿಗೆ ಶಿವಶರಣೆ ಮಲ್ಲಮ್ಮನ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು.
ನಂತರ ನಾವದಗಿಯ ಶ್ರೀಪರ್ವತೇಶ್ವರ ಸಂಸ್ಥಾನ ಬ್ರಹನ್ಮಠದ ಷಟಸ್ಥಲ ಬ್ರಹ್ಮಿ ರಾಜಗುರು ರಾಜೇಂದ್ರ ಒಡೆಯರ್ ಶಿವಾಚಾರ್ಯರ ಅಧ್ಯಕ್ಷತೆಯಲ್ಲಿ ಧರ್ಮಸಭೆ ನಡೆಯಿತು.
ಈ ಕಾರ್ಯಕ್ರಮದಲ್ಲಿ ಪರಮಪೂಜ್ಯರಾದ ಶ್ರೀ ಸಿದ್ದರಾಮ ಶಿವಾಚಾರ್ಯರು. ಶ್ರೀ ಶಿವಕುಮಾರ ಮಹಾಸ್ವಾಮಿಗಳು.ಶ್ರೀ ರಾಮಲಿಂಗಯ್ಯ ಮಹಾಸ್ವಾಮಿಗಳು.ಶ್ರೀ ಗಜದಂಡ ಶಿವಾಚಾರ್ಯರು.ಶ್ರೀ ಶಿವಯೋಗಿ ಮಹಾಸ್ವಾಮಿಗಳು.ಶ್ರೀ ಮರಿ ಹುಚ್ಚೇಶ್ವರ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ವೇದಮೂರ್ತಿ ಬಸಲಿಂಗಯ್ಯ ಶಾಸ್ತ್ರಿಗಳು. ಬಿ.ಸಾಲವಾಡಗಿ ಹಾಗೂ ಸುತ್ತಮುತ್ತಲಿನ ಎಲ್ಲಾ ಗ್ರಾಮದ ಸಕಲ ಸದ್ಭಕ್ತರು ಇದ್ದರು.