ಅಥಣಿ : ಮೂತ್ರ ವಿಸರ್ಜನೆಗೆ ಬಂದ ಶಾಲಾ ಬಾಲಕನ ಮೇಲೆ ಸರ್ಕಾರಿ ಬಸ್ ಹರಿದು ವಿದ್ಯಾರ್ಥಿ ಸ್ಥಳದಲ್ಲೆ ಸಾವನಪ್ಪಿರುವ ಘಟನೆ ಅಥಣಿ ಪಟ್ಟಣದಲ್ಲಿ ನಡೆದಿದೆ.
ಸುನಿಲ್ ಬಂಡಗರ (10) ಮೃತ ದುರ್ದೈವಿಯಾಗಿದ್ದು. ಬಾಲಕ ಪಟ್ಟಣದ ಗಲಗಲಿ ಆಸ್ಪತ್ರೆ ಬಳಿ ಟ್ಯೂಷನ್ ಬಂದಿದ್ದ ಮಧ್ಯಾಹ್ನದ ವೇಳೆ ಗೆಳೆಯರೊಂದಿಗೆ ಮೂತ್ರ ವಿಸರ್ಜನೆಗೆಂದು ರಸ್ತೆ ಬದಿ ಹೊರಟಾಗ ಹಿಂಬದಿಯಿಂದ ಬಂದ್ ಕೆ ಎಸ್ ಆರ್ ಟಿ ಸಿ ಬಸ್ ಬಾಲಕನ ಮೇಲೆ ಹರಿದಿದ್ದು ವಿದ್ಯಾರ್ಥಿ ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ.
ಈ ದೃಶ್ಯ ಸಿ ಸಿ ಟಿವಿಯಲ್ಲಿ ಸೇರಿಯಾಗಿದ್ದು ಘಟನಾ ಸ್ಥಳಕ್ಕೆ ಅಥಣಿ ಪೊಲೀಸ್ ರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾಲಕನನ್ನ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.