ಧಾನ್ಯ ವ್ಯಾಪಾರಸ್ತರಿಗೆ ಬೆಳಂ ಬೆಳಿಗ್ಗೆ ಅಧಿಕಾರಿಗಳು ಶಾಕ್ ಕೊಟ್ಟಿದ್ದು. ತಕ್ಕಡಿ ತೂಕ ಪರಿಶೀಲನೆ ಮಾಡಿದ ಅಧಿಕಾರಿಗಳು ವೆತ್ಯಾಸ ಕಂಡ ವ್ಯಾಪಾರಿಗಳಿಗೆ ತಲೆದಂಡ ವಿಧಿಸಿದ್ದಾರೆ.
ಅಥಣಿ ತಾಲೂಕಿನ ಬಳ್ಳಿಗೇರಿ, ಅನಂತಪುರ, ಖಿಳೆಗಾಂವ ಗ್ರಾಮಗಳಿಗೆ ಭೇಟಿ ನೀಡಿದ ತೂಕ ಮತ್ತು ಅಳತೆ ಮಾಪನ ಅಧಿಕಾರಿಗಳು ಅನಂತಪುರ ಗ್ರಾಮದ ಇಬ್ಬರು ವ್ಯಾಪಾರಸ್ಥರ ತಕ್ಕಡಿ ಸಿಜ್ ಮಾಡಿ ಕೇಸ್ ದಾಖಲಿಸಿ ದಂಡ ವಿಧಿಸಿದ್ದಾರೆ.
ಕಾನೂನು ಮಾಪನ ಶಾಸ್ತ್ರ ನಿರೀಕ್ಷಿಕರು ಅಥಣಿ ಉಮೇಶ ಎಮ್ ಹುಡೇದ ತಾಲೂಕಿನ ಹಲವು ವ್ಯಾಪಾರಸ್ಥರ ತಕ್ಕಡಿ ಪರೀಕ್ಷೆ ಮಾಡಿ ತೂಕದಲ್ಲಿ ವ್ಯತ್ಯಾಸ ಬಾರದಂತೆ ವಾರ್ನ್ ಮಾಡಿದ್ದಾರೆ.