ಮಾನ್ವಿಯ 85ನೆ ಕಾಲುವೆಗೆ ನೀರು ಬಾರದ ಹಿನ್ನೆಲೆಯಲ್ಲಿ ರೈತ ಮುಖಂಡರು ನೀರಾವರಿ ಇಲಾಖೆ ಕಚೇರಿಗೆ ಬೇಲಿ ಹಾಕಿ ರಾಜ್ಯ ಹೆದ್ದಾರಿ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕು ಮೂಲ ನೀರಾವರಿ ಪ್ರದೇಶವಾಗಿತ್ತು.ಆದರೆ ಮಳೆಗಾಲ ಬಂದರು ಸಹ ಮಾನ್ವಿಗೆ ನೀರು ಬಂದಿಲ್ಲವೆಂದರೆ ನಾವು ಇರೋಣವಾ ಅಥವಾ ಸಾಯೋಣ ಎಂದು ರೈತರು ಕಿಡಿಕಾರಿದರು.
ನಮಗೆ ನೀರು ಕೊಡಿ ಇಲ್ಲವೆ ವಿಷಕೊಡಿ ಎಂದು ರೈತರು ಗುಡುಗುತ್ತಾರೆಂದರೆ ಮಾನ್ವಿಯಲ್ಲಿ ಆಡಳಿತ ಇದೇನಾ ಅಥವಾ ಸತ್ತೋಗಿದೆನಾ ಎಂಬುದು ತಿಳಿಯದಾಗಿದೆ. ರೈತರು ಬೀದಿಗೆ ಬಂದು ಹೋರಾಟ ಮಾಡುತ್ತಾರೆಂದರೆ ಮಾನ್ವಿ ಜನತೆಯ ಕಷ್ಟವನ್ನು ಕೇಳೋರು ಇಲ್ಲವಾಗಿದೆ.
ರೈತರಿಂದ ನೀರಾವರಿ ಇಲಾಖೆ ಕಚೇರಿಗೆ ಬೇಲಿ ಹಾಕಿ ಆಕ್ರೋಶ