ಕಾದು ಕಾದು ಬೇಸರವಾಗಿ ಅಶ್ವತ್ಥ್ ನಾರಾಯಣ, ಮುನಿರತ್ನ, ಸೋಮಶೇಖರ್, ಬೈರತಿ ಬಸವರಾಜ ಸಭೆಯಲ್ಲಿ ಭಾಗವಹಿಸದೇ ಹೊರಟೇ ಹೋದ್ರು. ಸಭೆ ತಡವಾದ ಹಿನ್ನೆಲೆ ಮುನಿಸಿಕೊಂಡ ಮುನಿರತ್ನರನ್ನು ಹಾಗೂ ಸೋಮಶೇಖರ್ರನ್ನು ಜಮೀರ್ ಅಹ್ಮದ್ ಕೂಗಿ ಕರೆದು ಸಮಾಧಾನಪಡಿಸಿದರು.
ಬೆಂಗಳೂರು ಅಭಿವೃದ್ಧಿ, ಬಿಬಿಎಂಪಿ ಎಲೆಕ್ಷನ್ ಕುರಿತು ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಸಿಎಂ ಡಿಕೆ ಶಿವಕುಮಾರ್ ಸಭೆ ಕರೆದಿದ್ದರು. ಬೆಂಗಳೂರು ನಗರ ಸಂಸದರು, ಶಾಸಕರ ಸಭೆ ಕರೆದಿದ್ದು ಚರ್ಚೆ ಮಾಡಿದ್ದಾರೆ. ಈ ಸಭಗೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಸೇರಿ ಹಲವರು ಭಾಗವಹಿಸಿದ್ದರು. ಆದರೆ ಡಿಕೆ ಶಿವಕುಮಾರ್ ಸಭೆಗೆ ತಡವಾಗಿ ಬಂದರು. ಕಾದು ಕಾದು ಬೇಸರವಾಗಿ ಅಶ್ವತ್ಥ್ ನಾರಾಯಣ, ಮುನಿರತ್ನ, ಸೋಮಶೇಖರ್, ಬೈರತಿ ಬಸವರಾಜ ಸಭೆಯಲ್ಲಿ ಭಾಗವಹಿಸದೇ ಹೊರಟೇ ಹೋದ್ರು. ಸಭೆ ತಡವಾದ ಹಿನ್ನೆಲೆ ಮುನಿಸಿಕೊಂಡ ಮುನಿರತ್ನರನ್ನು ಹಾಗೂ ಸೋಮಶೇಖರ್ರನ್ನು ಜಮೀರ್ ಅಹ್ಮದ್ ಕೂಗಿ ಕರೆದು ಸಮಾಧಾನಪಡಿಸಿದರು.