ಬಿಜೆಪಿ ಶಾಸಕರಾದ ಮುನಿರತ್ನ ರಿಂದ ಜಾತಿ ನಿಂದನೆ ವಿಚಾರವಾಗಿ ಶಾಸಕ ಮುನಿರತ್ನ ಅವರು ಬಂಧನ ಭೀತಿ ಎದುರಿಸುವಂತಾಗಿದೆ, ಎರಡು ಸಮುದಾಯಗಳ ನಿಂದನೆ ಕೇಸ್ ನಿಂದ ಮುನಿರತ್ನ ಅವರ ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಅತ್ತ ಕಾಂಗ್ರೆಸ್‌ನಿಂದಲೂ ಮುನಿರತ್ನ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಡ ಕೇಳಿ ಬಂದಿದೆ. ಮುನಿರತ್ನ ಅವರದ್ದು ಎನ್ನಲಾಗುತ್ತಿರುವ ಆಡಿಯೋ ಲೀಕ್ ಆದ ಹಿನ್ನೆಲೆ ಸ್ವಪಕ್ಷದ ದಲಿತ ನಾಯಕರೂ ಕೂಡ ಮುನಿರತ್ನ ವಿರುದ್ದ ಆಕ್ರೋಶ ತೋತುತ್ತಿದ್ದಾರೆ.
ಈ ನಡುವೆ ಮುನಿರತ್ನ ವಿರುದ್ದದ ಎಫ್‌ಐಆರ್ ದಾಖಲಾಗಿರುವ ಕುರಿತಂತೆ, ಎರಡು ಸಮುದಾಯಗಳ ನಿಂದನೆಯಲ್ಲಿ ಸಿಲುಕಿರುವ ಶಾಸಕ ಮುನಿರತ್ನ. ಒಕ್ಕಲಿಗ ಹಾಗೂ ದಲಿತ ಸಮುದಾಯಗಳ ನಿಂದನೆಯಿಂದ ಇಕ್ಕಟ್ಟಿಗೆ ಸಿಲುಕಿಕೊಂಡಿದ್ದಾರೆ. ಈ ಆರೋಪಕ್ಕೆ ಸಂಬಂಧಿಸಿದಂತೆ ಮುನಿರತ್ನ ನಿನ್ನೆಯಿಂದಲೂ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದೆ ದೂರ ಉಳಿದುಕೊಂಡಿದ್ದು. ರಹಸ್ಯ ಸ್ಥಳದಲ್ಲಿ ಇದ್ದುಕೊಂಡು ತಮ್ಮ ವಕೀಲರ ಜೊತೆ ಮುನಿರತ್ನ ಚರ್ಚೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಕಾನೂನು ಹೋರಾಟ ಹಾಗೂ ಜಾತಿ ನಿಂದನೆ ಆರೋಪದಿಂದ ಹೊರಗೆ ಬರಲು ಪ್ರಯತ್ನಿಸುತ್ತಿದ್ದಾರೆ ಎಂತಲು ಕೇಳಿಬರ್ತಿದೆ.
ಮುನಿರತ್ನ ವಿರುದ್ದ ವೈಯಾಲಿಕಾವಲ್ ಠಾಣೆಯಲ್ಲಿ FIR ದಾಖಲಾಗಿದ್ದು, ಎಫ್ ಐ ಆರ್ ದಾಖಲಾಗ್ತಿದ್ದಂತೆ ಮುನಿರತ್ನ ನಾಪತ್ತೆಯಾಗಿದ್ದಾರೆ, ವೈಯ್ಯಾಲಿಕಾವಲ್ ಪೊಲೀಸರು ಮುನಿರತ್ನಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಸದ್ಯ ಅವರ ಮೊಬೈಲ್ ಅನ್ನು ಸ್ವಿಚ್ ಆಫ್ ಮಾಡಿಕೊಂಡು, ಮುನಿರತ್ನ ನಾಪತ್ತೆಯಾಗಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಮುನಿರತ್ನ ಮನೆ ಬಳಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ ಎಂದು ತಿಳಿದುಬಂದಿದೆ.